Advertisement

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

01:49 AM Dec 22, 2024 | Team Udayavani |

ಮುಂಬಯಿ: ಶೀಘ್ರ ನಡೆಯಲಿರುವಬೃಹನ್ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ಪಕ್ಷದ ವಕ್ತಾರ ಸಂಜಯ್‌ ರಾವತ್‌ ಸುಳಿವು ನೀಡಿದ್ದಾರೆ.

Advertisement

ಈ ಬಗ್ಗೆ ಪಕ್ಷದ ನಾಯಕ ಉದ್ಧವ್‌ ಠಾಕ್ರೆ ನಮ್ಮ ಪಕ್ಷದ ಇತರ ನಾಯಕರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರೂ ಏಕಾಂಗಿಯಾಗಿ ಸ್ಪರ್ಧೆ ಮಾಡುವ ಬಗ್ಗೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಚುನಾವಣೆ ಬಳಿಕ ಎಂವಿಎ­ಯಲ್ಲಿ ಫ‌ಲಿತಾಂಶ ವಿಚಾರ­ಕ್ಕಾಗಿ ಭಿನ್ನಾಭಿಪ್ರಾಯಗಳು ಮೂಡಿವೆ. ಈಗ ರಾವತ್‌ ಹೇಳಿಕೆ ಬಿರುಕು ಸುದ್ದಿಗೆ ಪುಷ್ಟಿ ನೀಡಿದೆ. ಅವಿಭಜಿತ ಶಿವಸೇನೆ 1997ರಿಂದ 2022­ರವರೆಗೆ ಮುಂಬಯಿ ಪಾಲಿಕೆಯಲ್ಲಿ ಅಧಿಕಾರ­ದಲ್ಲಿತ್ತು. ಅನಂತರ ಪಾಲಿಕೆಗೆ ಚುನಾವಣೆ ನಡೆದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next