Advertisement

ಬಲಗೊಳ್ಳಲಿದೆ ಜಿಪಿಎಸ್‌ ಪರ್ಯಾಯ ನಾವಿಕ್‌

12:26 AM May 24, 2023 | Team Udayavani |

ಇಸ್ರೋ ಸಂಸ್ಥೆಯ ಹೊಸ ಉಪಗ್ರಹ ಮೇ 29ರಂದು ಉಡಾವಣೆಗೊಳ್ಳಲಿದೆ. ಸದ್ಯ ನಾವು ಬಳಸುತ್ತಿರುವ ಗೂಗಲ್‌ ಮ್ಯಾಪ್‌ಗೆ ಪರ್ಯಾಯವಾಗಿ ದೇಶದ ವಿಜ್ಞಾನಿಗಳು ಅಭಿವೃದ್ಧಿಪಡಿಸಲು ಉದ್ದೇಶಿಸಿರುವ “ನಾವಿಕ್‌’ ವ್ಯವಸ್ಥೆಯನ್ನು ಬಲಪಡಿಸಲು ನ್ಯಾವಿಗೇಶನ್‌ ಸ್ಯಾಟಲೈಟ್‌ (ಎನ್‌ವಿಎಸ್‌-01)ನ ಮೊದಲ ಆವೃತ್ತಿಯನ್ನು ನಭಕ್ಕೆ ಕಳುಹಿಸಲಾಗುತ್ತದೆ.

Advertisement

ಎಲ್ಲಿಂದ ಉಡಾವಣೆ?
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಇರುವ ಸತೀಶ್‌ ಧವನ್‌ ಬಾಹ್ಯಾಕೇಶ ಕೇಂದ್ರದಿಂದ ನಭಕ್ಕೆ ಕಳುಹಿಸಲಾಗುತ್ತದೆ.ಇದು ಸುಧಾರಿತ ಆವೃತ್ತಿ ಮೇ 29ರಂದು ನಭಕ್ಕೆ ಕಳುಹಿಸಲಾಗುವ ಉಪಗ್ರಹ ಸುಧಾರಿತ ಆವೃತ್ತಿಯಾಗಿದೆ. 2016 ಎ.28ರಂದು ಇಸ್ರೋ ಇಂಡಿಯನ್‌ ರೀಜನಲ್‌ ನ್ಯಾವಿಗೇಶನ್‌ ಸ್ಯಾಟಲೈಟ್‌ ಸಿಸ್ಟಮ್‌ (ಐಆರ್‌ಎನ್‌ಎಸ್‌ಎಸ್‌) ಹೆಸರಿನಲ್ಲಿ ಉಪಗ್ರಹ ಉಡಾಯಿಸಿತ್ತು. ಮೇ 29ರಂದು ನಭಕ್ಕೆ ಕಳುಹಿಸಲಾಗುವುದು ಸುಧಾರಿತ ಆವೃತ್ತಿಯಾಗಿದೆ. ದೇಶದ ಪ್ರಾದೇಶಿಕ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಅದನ್ನು ಅಭಿವೃದ್ಧಿಪಡಿಸಲಾಗಿದೆ. ಐಆರ್‌ಎನ್‌ಎಸ್‌ಎಸ್‌ ಸರಣಿಯಲ್ಲಿ 1ಎ, 1ಬಿ, 1ಸಿ, 1ಡಿ, 1ಇ, 1ಎಫ್, 1ಜಿ, 1ಎಚ್‌ (ವಿಫ‌ಲಗೊಂಡಿತ್ತು), 1ಎಲ್‌ (2018ರಲ್ಲಿ ಯಶಸ್ಸು ಕಂಡಿತ್ತು) ಅನ್ನು ಉಡಾಯಿಸಲಾಗಿತ್ತು.

ಉಪಯೋಗಗಳು
– ಜಾಡು ಹಿಡಿಯುವ (ನ್ಯಾವಿಗೇ ಶ‌ನ್‌) ಕ್ಷೇತ್ರದಲ್ಲಿ ನಿಖರ ಮಾಹಿತಿ ಸಂಗ್ರಹಿಸಲು ಅನುಕೂಲವಾಗಲಿದೆ.
– ನಾಗರಿಕರಿಗೆ ಕೂಡ ವಿವಿಧ ರೀತಿಗಳಲ್ಲಿ ಅನುಕೂಲವಾಗಿ ಪರಿಣಮಿಸಲಿದೆ.
– ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಇದರಿಂದ ಲಾಭವಾಗಲಿದೆ.

ಉದ್ದೇಶವೇನು?
ದೇಶ ಹೊಂದಿರುವ ಭೌಗೋಳಿಕ ಗಡಿ ವ್ಯಾಪ್ತಿಯನ್ನು ಹೊರತುಪಡಿಸಿ ಇರುವ 1,500 ಕಿ.ಮೀ. ವ್ಯಾಪ್ತಿಯನ್ನು ನಾವಿಕ್‌ (NavIC) ಗಮನಿಸುತ್ತದೆ. ಹೊಸ ಉಪಗ್ರಹ ಎನ್‌ವಿಎಸ್‌-01 ಹೊಸ ತಲೆಮಾರಿನ ನ್ಯಾವಿಗೇಶನ್‌ ಪೇಲೋಡ್‌ ಹೊಂದಿದೆ. ಗಮನಾರ್ಹ ಅಂಶವೆಂದರೆ ದೇಶಿಯವಾಗಿ ಅಭಿವೃದ್ಧಿಪಡಿಸಿದ ಅಣು ಗಡಿಯಾರವನ್ನು ಹೊಂದಿದೆ. ಹೈಸ್ಪೀಡ್‌ ಡೇಟಾ ಲಿಂಕ್‌, ಅತ್ಯಾಧುನಿಕ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಇಸ್ರೋಗೆ ಕೂಡ ಇದು ಹೆಗ್ಗಳಿಕೆಯ ಅಂಶವೇ ಆಗಿದೆ. ಮೊದಲ ಬಾರಿಗೆ ಇಂಥ ಉಪಗ್ರಹವನ್ನು ನಭಕ್ಕೆ ಕಳುಹಿಸುತ್ತಿದೆ. ಇದರಿಂದಾಗಿ ಜಾಗತಿಕ ನ್ಯಾವಿಗೇಶ‌ನ್‌ (ಜಾಡು ಹಿಡಿಯುವ) ಕ್ಷೇತ್ರದಲ್ಲಿ ಪ್ರಧಾನ ಮಾರುಕಟ್ಟೆಯಾಗುವ ಹಂಬಲವನ್ನೂ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next