Advertisement
2019-20ನೇ ಸಾಲಿನಲ್ಲಿ ರಾಜ್ಯದಲ್ಲಿ 2,44,901 ಬಾಲಕಿಯರು ಹಾಗೂ 2,59,624 ಬಾಲಕರಿಗೆ ನೀಡಲಾಗಿತ್ತು. ಕಳೆದ ವರ್ಷ 5 ಲಕ್ಷ ಸೈಕಲ್ ವಿತರಿಸುವ ಅಂದಾಜು ಇತ್ತು. ಆದರೆ ಲಾಕ್‌ಡೌನ್, ಅನುದಾನದ ಕೊರತೆ ಇತ್ಯಾದಿ ಕಾರಣಗಳಿಂದ ಕೈ ಬಿಡಲಾಗಿತ್ತು. ಜನವರಿಯಿಂದ ಮಾರ್ಚ್ ವರೆಗೆ ಭೌತಿಕ ತರಗತಿ ನಡೆದಿದ್ದರೂ ನೀಡಿರಲಿಲ್ಲ. ಹೀಗಾಗಿರುವಾಗ ಈ ಬಾರಿಯೂ ಸೈಕಲ್ ಪಡೆಯುವ ಭರವಸೆ ಮಕ್ಕಳಲ್ಲಿಲ್ಲ.
ಗ್ರಾಮೀಣ ಭಾಗದ ಸರಕಾರಿ/ಅನುದಾನಿತ 8ನೇ ತರಗತಿ ಶಾಲಾ ಮಕ್ಕಳಿಗಾಗಿ 2008ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ “ಸೈಕಲ್ ಭಾಗ್ಯ’ ಯೋಜನೆ ಪ್ರಕಟಿಸಿದ್ದರು. ನಗರಪಾಲಿಕೆಗಳ ಸರಹದ್ದಿನಲ್ಲಿ ಬರುವ ಶಾಲೆಗಳ ಮಕ್ಕಳು ಮತ್ತು ಬಸ್‌ಪಾಸ್ ಹಾಗೂ ಹಾಸ್ಟೆಲ್ ಸೌಲಭ್ಯ ಹೊಂದಿರುವ ಮಕ್ಕಳನ್ನು ಹೊರತುಪಡಿಸಿ ಇತರ ಮಕ್ಕಳಿಗೆ ಈ ಸೌಲಭ್ಯ ದೊರೆಯುತ್ತದೆ.
Related Articles
ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್, ಅಪರಾಹ್ನದ ಉಪಾಹಾರ, ಸ್ಕೂಲ್ ಬ್ಯಾಗ್ (ಎಸ್‌ಸಿ/ಎಸ್‌ಟಿ ಮಕ್ಕಳಿಗೆ) ಸೇರಿದಂತೆ ಎಲ್ಲ ಯೋಜನೆಗಳಿಗೂ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಭೌತಿಕ ತರಗತಿ ಆರಂಭವಾದರೆ ನೀಡಲಾಗುವುದು. ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು..
– ಮಲ್ಲೇಸ್ವಾಮಿ, ಎನ್.ಎಚ್. ನಾಗೂರ, ದ.ಕ. ಮತ್ತು ಉಡುಪಿ ಡಿಡಿಪಿಐ
Advertisement
ಸಮವಸ್ತ್ರವೂ ಸಂಶಯಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್‌ಗಳನ್ನು ಕೂಡ ಆನ್‌ಲೈನ್ ತರಗತಿ ನೆಪದಿಂದ ಆರಂಭದಲ್ಲಿ ನೀಡಿರಲಿಲ್ಲ. ಬಳಿಕ ಜನವರಿಯಿಂದ ಮಾರ್ಚ್‌ವರೆಗೆ ಭೌತಿಕ ತರಗತಿ ನಡೆದ ಹಿನ್ನೆಲೆಯಲ್ಲಿ ನೀಡಲಾಗಿತ್ತು. ಈ ಬಾರಿಯೂ ಆನ್‌ಲೈನ್ ಸಮಯದಲ್ಲಿ ಇವೆಲ್ಲ ದೊರಕುವುದು ಅನುಮಾನ. – ದಿನೇಶ್ ಇರಾ