Advertisement

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

06:21 PM Jan 05, 2025 | Team Udayavani |

ಯಕ್ಷಧ್ರುವ ಪಟ್ಲ ಫೌಂಡೇಶನ್‌ (ರಿ.)ಮಂಗಳೂರು ಇದರ ಬೆಳ್ತಂಗಡಿ ಘಟಕದ ವತಿಯಿಂದ ಡಿ. 14ರಂದು ಗುರುವಾಯನಕೆರೆ ಶಕ್ತಿನಗರ ನವಶಕ್ತಿ ಕ್ರೀಡಾಂಗಣದಲ್ಲಿ ನಡೆದ “ಯಕ್ಷಸಂಭ್ರಮ -2024’ರ ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕಿನ 7 ಸರಕಾರಿ ಹಾಗೂ ಒಂದು ಖಾಸಗಿ ಶಾಲೆಯ ಸುಮಾರು 500 ವಿದ್ಯಾರ್ಥಿಗಳು ರಂಗಪ್ರವೇಶ
ಗೈದು ತಮ್ಮ ಕಲಾ ಪ್ರೌಢಿಮೆಯನ್ನು ಅಭಿವ್ಯಕ್ತಗೊಳಿಸಿದರು.

Advertisement

ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಗಳಾದ ಕಳ್ಮಂಜ ಸರಕಾರಿ ಪ್ರೌಢ ಶಾಲೆ, ನಿಡ್ಲೆ ಸರಕಾರಿ ಪ್ರೌಢ ಶಾಲೆ, ಪೆರ್ಲ-ಬೈಪಾಡಿ ಸರಕಾರಿ ಪ್ರೌಢ ಶಾಲೆ, ಅನಾರು-ಪಟ್ರಮೆ ಸ. ಉ.ಹಿ.ಪ್ರಾ.ಶಾಲೆ, ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪಟ್ಟೂರು ಶ್ರೀ ರಾಮ ಪ್ರೌಢ ಶಾಲೆ ಹಾಗೂ ಬೆಳ್ತಂಗಡಿ ಹಳೆಕೋಟೆ ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ “ಯಕ್ಷಧ್ರುವ ಪಟ್ಲ’ ಇದರ ಯಕ್ಷಶಿಕ್ಷಣ ಯೋಜನೆಯನ್ವಯ ಯಕ್ಷಗುರುಗಳಾದ ಈಶ್ವರ ಪ್ರಸಾದ್‌ ನಿಡ್ಲೆ, ದೇವಿಪ್ರಸಾದ್‌ ಶಕ್ತಿನಗರ, ಗುರುವಾಯನಕೆರೆ ಹಾಗೂ ಅರುಣ್‌ ಕುಮಾರ್‌ ಧರ್ಮಸ್ಥಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಕುಣಿತ, ಮಾತುಗಾರಿಕೆ ಹಾಗೂ ಅಭಿನಯದ ತರಬೇತಿ ನೀಡಿ ರಂಗಪ್ರವೇಶಕ್ಕೆ ಅಣಿಗೊಳಿಸಿದ್ದರು.

ವಿದ್ಯಾರ್ಥಿಗಳು ಪೂರ್ವರಂಗ ಸಹಿತ ಕಂಸ ವಧೆ, ಶ್ರೀ ರಾಮ ಪಟ್ಟಾಭಿಷೇಕ, ಕೃಷ್ಣ ಲೀಲೆ, ಸುದರ್ಶನ ವಿಜಯ ಹಾಗೂ ಜಾಂಬವತಿ ಕಲ್ಯಾಣ ಪೌರಾಣಿಕ ಪ್ರಸಂಗಗಳನ್ನು ಸಮರ್ಥ ಹಿಮ್ಮೇಳದ ಸಹಕಾರದಿಂದ ಯಶಸ್ವಿಯಾಗಿ ಪ್ರದರ್ಶಿಸಿ, ಪ್ರೇಕ್ಷಕರ ಮನಗೆದ್ದರು.

 ಸಾಂತೂರು ಶ್ರೀನಿವಾಸ ತಂತ್ರಿ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next