ಹೊಸದಿಲ್ಲಿ: ಕಳೆದ ಡಿ.18ರ ಗುಜರಾತ್ ಚುನಾವಣಾ ಮತ ಎಣಿಕೆಯ ದಿನ ಕೇವಲ 99 ಸ್ಥಾನಗಳನ್ನು ಜಯಿಸಿದ ಭಾರತೀಯ ಜನತಾ ಪಕ್ಷ ನಾಲ್ಕು ದಿನಗಳು ತರುವಾರ ಸೆಂಚರಿ (100 ಸೀಟುಗಳ ಸಾಧನೆ) ಯನ್ನು ದಾಖಲಿಸಿರುವುದು ಬಿಜೆಪಿಗೆ ಸಿಹಿ ಸುದ್ದಿ ಎನಿಸಿದೆ.
ಪಕ್ಷೇತರ ಶಾಸಕ ರತನ್ಸಿಂಗ್ ರಾಠೊಡ್ ಅವರು ಇಂದು ಬಿಜೆಪಿಗೆ ಬೇಷರತ್ ಬೆಂಬಲವನ್ನು ಘೋಷಿಸಿದ್ದಾರೆ.
ಕಾಂಗ್ರೆಸ್ ನಿಂದ ಸೀಟು ಪಡೆಯಲು ವಿಫಲರಾಗಿದ್ದ ರಾಠೊಡ್ ಅವರು ಮಧ್ಯ ಗುಜರಾತ್ ಕ್ಷೇತ್ರದಿಂದ ಪಕ್ಷೇತರನಾಗಿ ಜಯಿಸಿದ್ದರು.
182 ಸ್ಥಾನಗಳ ಗುಜರಾತ್ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆನ್ನು ಏರಲು 92 ಸ್ಥಾನ ಗೆದ್ದರೆ ಸಾಕಿತ್ತು. ಮತ ಎಣಿಕೆಯ ದಿನ ಬಿಜೆಪಿ 99 ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಕಾಂಗ್ರೆಸ್ಗೆ 77 ಸ್ಥಾನ ದಕ್ಕಿತ್ತು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಮ್ಮ ಪಕ್ಷವು 150 ಸ್ಥಾನ ಗೆಲ್ಲುವುದೆಂಬ ವಿಶ್ವಾಸವನ್ನು ಪ್ರಕಟಿಸಿದ್ದರು.