Advertisement

ಗಣೇಶ್ ಸರಳ  ಹುಟ್ಟುಹಬ್ಬ

11:18 AM Jul 03, 2021 | Team Udayavani |

ನಟ ಗೋಲ್ಡನ್‌ಸ್ಟಾರ್‌ ಗಣೇಶ್‌ ಶುಕ್ರವಾರ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಕುಟುಂಬ ಸದಸ್ಯರೊಂದಿಗೆ ಹುಟ್ಟುಹಬ್ಬ ಆಚರಿಸಿದ ಗಣೇಶ್‌ ಅವರಿಗೆ ಅವರ ಎರಡು ಚಿತ್ರತಂಡಗಳು ವಿಶೇಷ ಗಿಫ್ಟ್ನೀಡಿವೆ.

Advertisement

ಯೋಗರಾಜ್‌ ಭಟ್‌ ನಿರ್ದೇಶನದ “ಗಾಳಿಪಟ-2′ ಚಿತ್ರತಂಡ ಚಿತ್ರದ ಮೋಶನ್‌ ಪೋಸ್ಟರ್‌ ರಿಲೀಸ್‌ ಮಾಡಿದರೆ, “ತ್ರಿಬಲ್‌ ರೈಡಿಂಗ್‌’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರದ ಟೀಸರ್‌ ಸಾಕಷ್ಟು ಅಂಶಗಳಿಂದ ಗಮನ ಸೆಳೆಯುತ್ತಿದ್ದು, ಗಣೇಶ್‌ ಅವರ ಅಭಿಮಾನಿಗಳಿಗೆ ಇಷ್ಟವಾಗಲಿದೆ.

ಇನ್ನು, ಸುನಿ ನಿರ್ದೇಶನದ “ಸಖತ್‌’ ಸಿನಿಮಾ ತಂಡವೂ ಚಿತ್ರದ ಟೀಸರ್‌ ರಿಲೀಸ್‌ ಆಗಬೇಕಿತ್ತು. ಆದರೆ, ಒಂದೇ ದಿನ ಎರಡೆರಡು ಚಿತ್ರದ ಟೀಸರ್‌ ರಿಲೀಸ್‌ ಬೇಡ ಎಂಬ ಕಾರಣಕ್ಕೆ ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡಿದೆ. ಸದ್ಯ ಗಣೇಶ್‌ “ಸಖತ್‌’ ಚಿತ್ರೀಕರಣದ ಲ್ಲಿದ್ದು, ಮುಂದಿನ ವಾರದಿಂದ “ತ್ರಿಬಲ್‌ ರೈಡಿಂಗ್‌’ ಡಬ್ಬಿಂಗ್‌ ಶುರು ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next