Advertisement

ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ

05:23 PM May 19, 2018 | Team Udayavani |

ಉಪ್ಪಿನಬೆಟಗೇರಿ: ಗ್ರಾಮದ ಶ್ರೀ ಮೂರುಸಾವಿರ ವಿರಕ್ತಮಠಕ್ಕೆ ಮಾಜಿ ಶಾಸಕ ಎ.ಬಿ. ದೇಸಾಯಿ ಭೇಟಿ ನೀಡಿ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿಯವರ ಆಶೀರ್ವಾದ ಪಡೆದರು.

Advertisement

ಈ ವೇಳೆ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಮೃತ ದೇಸಾಯಿ ಜಯ ಸಾಧಿಸಿ ಶಾಸಕರಾಗಿದ್ದು ಈ ಕ್ಷೇತ್ರದ ಸುದೈವ. ಜನರು ಚಿಕ್ಕ ವಯಸ್ಸಿನವರಾದ ಅಮೃತ ದೇಸಾಯಿ ಅವರನ್ನು ಆರಿಸಿ ತಂದಿದ್ದು ಎಲ್ಲರಿಗೂ ಸಂತೋಷದ ವಿಷಯ. ಅವರು ಜನರ ಅಪೇಕ್ಷೆಯಂತೆ ಕ್ಷೇತ್ರದಲ್ಲಿ ಉತ್ತಮವಾದ ಆಡಳಿತ ನೀಡಬೇಕು ಎಂದರು.

ಮಾಜಿ ಶಾಸಕ ಎ.ಬಿ. ದೇಸಾಯಿ ಮಾತನಾಡಿ, ಕ್ಷೇತ್ರದ ಜನ ನಂಬಿಕೆ ಇಟ್ಟು ನನ್ನ ಮಗ ಅಮೃತ ದೇಸಾಯಿ ಅವರನ್ನು ಗೆಲ್ಲಿಸಿದ್ದು ನಾನು ಚಿರ ಋಣಿಯಾಗಿದ್ದೇನೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಅದಕ್ಕೆ ಮೊದಲು ಆದ್ಯತೆ ನೀಡಿ ಹಂತ ಹಂತವಾಗಿ ಜನರ ಎಲ್ಲ ಕಾರ್ಯಗಳನ್ನು ಮಾಡಲು ಅಮೃತಗೆ ತಿಳಿಸಲಾಗುವುದು ಎಂದರು.

ಶಂಕ್ರಯ್ಯ ಇಂಚಗೇರಿಮಠ, ಧರಣೇಂದ್ರ ಅಷ್ಟಗಿ, ಬಸವರಾಜ ಕಬ್ಬೂರ, ರುದ್ರಪ್ಪ ಬಡ್ಡೂರ, ದುಂಡಪ್ಪ ಪಟ್ಟಣಶೆಟ್ಟಿ, ಬಸವಂತಪ್ಪ ಲಗಮಣ್ಣವರ, ಕೃಷ್ಣಾ ಬುದ್ನಿ, ಈರಪ್ಪ ಬಡ್ಡೂರ, ಮಡಿವಾಳಪ್ಪ ಕೋಟೂರ, ವಿರೂಪಾಕ್ಷಪ್ಪ ಬೆಳವಡಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next