Advertisement
ಏನಿದು ಒಲೆ?ದರಳೆ (ಒಣ ಎಲೆ), ಕಸ, ಕಡ್ಡಿ, ಮರದ ತುಂಡು, ಗೆರಟೆ, ತೆಂಗಿನಕಾಯಿ ಸಿಪ್ಪೆ, ಅಡಿಕೆ ಸಿಪ್ಪೆ, ಪೇಪರ್ ಹೀಗೆ ಏನೇ ಕಸ ಹಾಕಿದರೂ ಸಾಕು ಎಂಬಷ್ಟು ಮಿತವಾಗಿ ಇಂಧನ ಬಳಕೆಯಾಗುವ ಒಲೆ ಇದು. ಇದರಲ್ಲಿ ಅನ್ನ, ಸಾರು ಬೇಯುವಾಗ ಜತೆಯಾಗಿ ಬಿಸಿನೀರು ಕಾಯಿಸುವ ವ್ಯವಸ್ಥೆಯಿದೆ. ಹೊಗೆ ಕಡಿಮೆ. ಇದ ರಿಂದಾಗಿ ಆರೋಗ್ಯಕ್ಕೂ ಕ್ಷೇಮ, ಜೇಬಿಗೂ ಹಿತಕರ. ಹಾಕಿದ ಇಂಧನ ಒಲೆಯ ಬುಡಕ್ಕೆ ಮುಂದೂಡಲು ಸೂð ಮಾದರಿಯನ್ನು ಬಳಸಿದ್ದಾರೆ. ಅಂತೆಯೇ ಬಿಸಿನೀರಿಗಾಗಿ ನೀರು ಹೊರಹೋಗುವ, ಒಳ ಬರುವ ಎರಡು ಪ್ರತ್ಯೇಕ ಪ್ರವೇಶಿಕೆಗಳನ್ನು ನೀಡಿದ್ದಾರೆ. ತಣ್ಣೀರು ಬರಲು ಟ್ಯಾಂಕ್‌ನಿಂದ ನೇರ ಸಂಪರ್ಕ ನೀಡಿ ಬಿಸಿ ನೀರು ಇನ್ನೊಂದು ಕೊಳವೆ ಮೂಲಕ ಹೋಗುವ ವ್ಯವಸ್ಥೆಯಿದೆ. ಟ್ಯಾಂಕ್ ಇಲ್ಲದಿದ್ದ ಮನೆ ಗಳಿಗೆ ನೀರು ತುಂಬಿಸುವ ಪ್ರತ್ಯೇಕ ವ್ಯವಸ್ಥೆಯೂ ಇದೆ.
ಕೋಟೇಶ್ವರದ ಸರ್ವಿಸ್ ರಸ್ತೆ ಬದಿ ಸಣ್ಣ ವೆಲ್ಡಿಂಗ್ ಶಾಪ್ ಹೊಂದಿರುವ ಆಚಾರ್ಯರು ತಮ್ಮ ವೆಲ್ಡಿಂಗ್ ವೃತ್ತಿಗಿಂತ ಹೆಚ್ಚು ಸಮಯ ಇಂತಹ ಸಂಶೋಧನೆಗೆ ಮೀಸಲಿಡುತ್ತಾರೆ. ಇದನ್ನೂ ಓದಿ:ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಗರಂ ಆದ ಹಾಲಾಡಿ ಶ್ರೀನಿವಾಸ ಶೆಟ್ಟಿ
Related Articles
ಬೆಂಗಳೂರಿಗ ಹೋಗಿದ್ದಾಗ ರೈಲಿನಲ್ಲಿ ಪ್ರಯಾಣಿಕರು ಮಾಡಿದ ತ್ಯಾಜ್ಯ ಹಳಿ ಮೇಲೆ ಬೀಳುವುದು ಕಂಡರು. ನಿಲ್ದಾಣಗಳಲ್ಲಿ ದುರ್ವಾಸನೆಗೆ ಕಾರಣವಾಗುವ, ಮೆಕಾನಿಕ್‌ಗಳ್ಳೋ ಯಾರಾದರೂ ರೈಲಿನ ಅಡಿಭಾಗಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಅಶುಚಿ ವಾತಾವರಣ ಇರುವುದನ್ನು ಮನಗಂಡರು. ಅದಕ್ಕಾಗಿ ಒಂದು ಉಪಕರಣ ಕಂಡುಹಿಡಿದರು. ಪ್ರತಿ 80 ಕಿ.ಮೀ.ಗೊಂದು ಶೌಚಗುಂಡಿ ಮಾದರಿಯಲ್ಲಿ ರೈಲು ಹಳಿ ಪಕ್ಕದಲ್ಲಿ ನಿರ್ಮಾಣ. ಅದಕ್ಕೆ ರಿಲೀಸರ್ ಮೂಲಕ ತ್ಯಾಜ್ಯ ಸುರಿಯುವ ಸ್ವಯಂಚಾಲಿತ ವ್ಯವಸ್ಥೆ ಮಾಡಿದ್ದರು. ಇದನ್ನು ರೈಲ್ವೆ ಇಲಾಖೆ ಮೆಚ್ಚುಗೆ ಸೂಚಿಸಿತ್ತು.
Advertisement
ಕಡಿಮೆ ಇಂಧನಈಗಾಗಲೇ ಸತತ ತಯಾರಿ ಮೂಲಕ ಈಗ ಐದನೇ ಒಲೆ ತಯಾರಿಸಿದ್ದಾರೆ. ಪ್ರತಿ ಸಲ ಗ್ರಾಹಕರಿಂದ ಬಂದ ಮಾಹಿತಿ ಮೇರೆಗೆ ಬದಲಾವಣೆ ಮಾಡಿಕೊಂಡಿದ್ದಾರೆ. ಹೊಗೆ ಎತ್ತರಕ್ಕೆ ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗ್ರಾಹಕರು ಹೇಳುವಂತೆ ಶೇ.25ರಷ್ಟು ಇಂಧನ ಸಾಕಾಗುತ್ತದೆ. ಅಂದರೆ ಶೇ.75 ಇಂಧನ ಉಳಿತಾಯವಾಗುತ್ತದೆ. ಹೋಟೆಲ್, ಮನೆ, ಕಾರ್ಖಾನೆಗಳಲ್ಲಿ ಬಳಕೆಗೆ ಬೇಡಿಕೆಯಿದೆ. ಹೊಸತರ ಕಡೆಗೆ ತುಡಿತ
4 ತಿಂಗಳ ಸತತ ಪರಿಶ್ರಮದಿಂದ ಮಿತ ಇಂಧನದ ಈ ಒಲೆ ಸಿದ್ಧವಾಗಿದೆ. ಪ್ರಾಯೋಗಿಕವಾಗಿ ಅನೇಕ ಒಲೆಗಳನ್ನು ಮಾಡಿದ್ದು ಬಳಿಕ ಮಾರ್ಪಾಡುಗಳನ್ನೂ ಮಾಡಿದ್ದೇನೆ. ಇಂಧನ ಬೆಲೆ ಏರಿದೆ ಎಂದು ಬೊಬ್ಬೆ ಹಾಕುವುದಕ್ಕಿಂತ ಅದಕ್ಕೆ ಪರಿಹಾರ ಹೇಗೆ ಎಂದು ಯೋಚಿಸುವುದು ಹೆಚ್ಚು ಪ್ರಸ್ತುತ ಎನಿಸಿತು.-ಕೃಷ್ಣಯ್ಯ ಆಚಾರ್ಯ ಕೂರಾಡಿ, ಕೋಟೇಶ್ವರ – ಲಕ್ಷ್ಮೀ ಮಚ್ಚಿನ