Advertisement
ಈ ಯೋಜನೆಗಳು ಉಚಿತ ಆವರ್ತಕ ನಿರ್ವಹಣೆಯನ್ನು ಒಳಗೊಂಡಿದ್ದು ವಾಹನಗಳ ಬಿಡಿ ಭಾಗಗಳ ಬದಲಿಗಳ ಮೇಲೆ ರಿಯಾಯಿತಿ, ಎಕ್ಸ್‌ಪ್ರೆಸ್ ಕೇರ್ ಮತ್ತು ಪಾಲಿಶಿಂಗ್‌ನಂತಹ ಸೇವೆಯನ್ನು ಒಳಗೊಂಡಿದೆ. ಇದು ಗ್ರಾಹಕರಿಗೆ ಅನುಕೂಲ ಮತ್ತು ಉಳಿತಾಯವನ್ನು ಒದಗಿಸುತ್ತದೆ.
ಈ ಮೂರು ಯೋಜನೆಗಳಲ್ಲಿ ಗ್ರಾಹಕರಿಗೆ ತಮ್ಮ ವಾಹನಗಳ ನಿರ್ವಹಣೆಯ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಸವೆಯುವ ಬಿಡಿ ಭಾಗಗಳ ಮೇಲೆ ಶೇ. 10 ರಿಯಾಯಿತಿ ಪಡೆಯುವ ಅವಕಾಶ ಇದೆ. ಗ್ರಾಹಕರು ಎಥರ್‌ನ ಯಾವುದೇ ಅಧಿಕೃತ 210 ಸೇವಾ ಕೇಂದ್ರಗಳು ಮತ್ತು 230 ಅನುಭವ ಕೇಂದ್ರಗಳಲ್ಲಿ ಈ ಯೋಜನೆಯ ಲಾಭ ಪಡೆಯಲು ಅವಕಾಶವಿದೆ. ಯೊಜನೆಗಳ ಬೆಲೆ 1,130ರಿಂದ 2,400ರ ವರೆಗೆ ಇದೆ ಮತ್ತು ಇದು ಗ್ರಾಹಕರಿಗೆ 5,900ರ ವರೆಗೆ ಪ್ರಯೋಜನಗಳನ್ನು ನೀಡುತ್ತದೆ ಎಂದು ಕಂಪೆನಿಯ ಪ್ರಕಟನೆ ತಿಳಿಸಿದೆ.