Advertisement

ನಗರ ಪೊಲೀಸರಿಂದ ವಾಹಿನಿ?

12:22 PM May 20, 2017 | |

ಬೆಂಗಳೂರು: ದೇಶದಲ್ಲೇ ಇದೇ ಮೊದಲ ಬಾರಿಗೆ ಸಿಟಿ ಪೊಲೀಸ್‌ ಟಿವಿ ಚಾನೆಲ್‌ ಆರಂಭಿಸಲು ನಗರ ಪೊಲೀಸ್‌ ವಿಭಾಗ ಸಜ್ಜಾಗಿದೆ.  ಬೆಂಗಳೂರು ಸಿಟಿ ಪೊಲೀಸ್‌ ಚಾನೆಲ್‌ ಆರಂಭಿಸುವ ಬಗ್ಗೆ ಸ್ವತಃ ನಗರ ಪೊಲೀಸ್‌ ಆಯುಕ್ತ  ಪ್ರವೀಣ್‌ ಸೂದ್‌ ಅವರೇ ಟ್ವೀಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

Advertisement

“ಬೆಂಗಳೂರು ಪೊಲೀಸರಿಂದ ಮತ್ತೂಂದು ಪ್ರಥಮವನ್ನು ನಿರೀಕ್ಷೆ ಮಾಡಿ. ನಾವು ನಿಮ್ಮನ್ನು ನೋಡುತ್ತಿದ್ದೇವೆ. ನೀವೂ ನಮ್ಮನ್ನು ನೋಡಬಹುದು. ಬಿಸಿಪಿ ಟಿವಿ ಶೀಘ್ರದಲ್ಲೇ ಬರಲಿದೆ” ಎಂಬ ಸಂದೇಶವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಜತೆಗೆ 4 ಸೆಕೆಂಡ್‌ಗಳ ವಿಡಿಯೋ ಅಪ್‌ಲೋಡ್‌ ಮಾಡಿದ್ದು, ಬೆಂಗಳೂರು ನಗರ ಪೊಲೀಸರ ಲಾಂಛನದ ಕೆಳಗೆ ಆಂಗ್ಲ ಅಕ್ಷರಗಳಲ್ಲಿ ಟಿವಿ ಎಂದು ಬರೆಯಲಾಗಿದೆ.

ಪ್ರವೀಣ್‌ ಸೂದ್‌ ಅವರ ಟ್ವೀಟರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಮಂದಿ ಆಯುಕ್ತರ ಟ್ವೀಟ್‌ನ್ನು ರೀ ಟ್ವೀಟ್‌  ಮಾಡುವ  ಮೂಲಕ ಮೆಚ್ಚುಗೆ ವ್ಯಕ್ತಪಡಿಧಿಸಿದ್ದಾರೆ. ಇನ್ನೂ ಕೆಲವರು ಜಾಹೀರಾತು ಪಡೆದುಕೊಳ್ಳದೆ ಸುದ್ದಿ ಪ್ರಸಾರ ಮಾಡಿ. ಪೊಲೀಸರ ಈ ನಡೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೀಘ್ರವೇ ಕಾರ್ಯಾರಂಭ ಮಾಡಲಿರುವ ಸಿಟಿಪೊಲೀಸ್‌ ಚಾನೆಲ್‌, ಸಾರ್ವಜನಿಕರಿಗೆ ಪೊಲೀಸ್‌ ಸೇವೆಗಳ ಮಾಹಿತಿ ನೀಡುವುದು, ಅಪರಾಧಗಳ ಬಗ್ಗೆ ಜಾಗೃತಿ ಸಂದೇಶ ಪ್ರಸಾರ ಮಾಡುವುದು, ಅತ್ಯುತ್ತಮ  ಸೇವೆಸಲ್ಲಿಧಿಸುವ ಸಿಬ್ಬಂದಿಯನ್ನು ಗುರ್ತಿಸುವುದು, ವಿಶೇಷ  ಪ್ರಕರಣಗಳ ಬೇಧಿಸಿದ ಸಿಬ್ಬಂದಿ ಕಾರ್ಯಾಚರಣೆ, ಮಹಿಳೆಯರ ರಕ್ಷ ಣೆಯ ಮುಂಜಾಗ್ರತೆ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next