ಅಜೆರ್ಬೈಜಾನ್: 60ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಅಜೆರ್ಬೈಜಾನ್ ಏರ್ ಲೈನ್ಸ್ ಬೆಂಕಿ ಹೊತ್ತಿಕೊಂಡು ಪತನಗೊಂಡ ಘಟನೆ ಬುಧವಾರ (ಡಿ.25) ಕಜಕ್ ಸ್ತಾನ್ ಅಕ್ಟೌ ನಗರದ ಸಮೀಪ ನಡೆದಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಎಂಬ್ರೇರ್ 190 ವಿಮಾನವು ಅಜೆರ್ಬೈಜಾನ್ ನ ರಾಜಧಾನಿ ಬಾಕುವಿನಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು. ಆದರೆ ಗ್ರೋಜ್ನಿಯಲ್ಲಿ ದಟ್ಟ ಮಂಜುಕವಿದ ವಾತಾವರಣ ಇದ್ದ ಕಾರಣ ವಿಮಾನ ಮಾರ್ಗ ಬದಲಿಸಿ ಹೊರಟಿತ್ತು.
ವಿಮಾನದಲ್ಲಿ ಐವರು ಸಿಬಂದಿಗಳು ಸೇರಿದಂತೆ 62 ಮಂದಿ ಪ್ರಯಾಣಿಸುತ್ತಿದ್ದು, ಏಕಾಏಕಿ ಬೆಂಕಿಹೊತ್ತುಕೊಂಡು ವಿಮಾನ ಪತನಗೊಂಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ, ಹಲವು ಪ್ರಯಾಣಿಕರು ಸಾವ*ನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಆದರೆ ಸಾವಿನ ಸಂಖ್ಯೆ ಇನ್ನಷ್ಟೇ ನಿಖರವಾಗಿ ತಿಳಿಯಬೇಕಾಗಿದೆ.
ಆಕಾಶ ಮಾರ್ಗದಲ್ಲೇ ವಿಮಾನ ನಿಯಂತ್ರಣ ತಪ್ಪಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಬಯಲು ಪ್ರದೇಶದಲ್ಲಿ ಬೆಂಕಿ ಹೊತ್ತುಕೊಂಡ ತಕ್ಷಣವೇ ನೆಲಕ್ಕಪ್ಪಳಿಸಿದ್ದು, ಪ್ರಯಾಣಿಕರು ಚೀರಾಡುತ್ತಿರುವ ಶಬ್ದ ವಿಡಿಯೋದಲ್ಲಿದೆ.