ಕೋಲ್ಕತಾ: ಮಹತ್ವದ ಕಾರ್ಯಾಚರಣೆ ನಡೆಸಿದ ಎಸ್‌ಟಿಎಫ್ ಪೊಲೀಸರು ನಾಲ್ವರು ನಿಯೋ -ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾ ಸಂಘಟನೆಯ ಉಗ್ರರನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಬಂಧಿತರ ಪೈಕಿ ಮೂವರು ಬಾಂಗ್ಲಾ ಪ್ರಜೆಗಳಾಗಿದ್ದು, ಆ ಪೈಕಿ ಇಬ್ಬರು ಜಿಯಾ ಉರ್ ರೆಹಮಾನ್ ಮತ್ತು ಮಮನೂರ್ ರಶೀದ್ ಎನ್ನುವವರಾಗಿದ್ದಾರೆ.ಇಬ್ಬರು ಉಗ್ರರನ್ನು ಸೀಲ್ಡಾದ ರೈಲು ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿರುವ ಬಗ್ಗೆ ವಿವರಗಳು ಲಭ್ಯವಾಗಿದೆ.
ಸಾಹಿನ್ ಅಲಾಮ್ ಮತ್ತು ರೊಬಿ ಉಲ್ ಇಸ್ಲಾಂ ಎನ್ನುವ ಇಬ್ಬರನ್ನು ಹೌರಾದ ರೈಲು ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಗಿದೆ. ಸಾಹಿನ್ ಅಲಾಮ್ ಬಾಂಗ್ಲಾದವನಾಗಿದ್ದು, ರೊಬಿ ಉಲ್ ಇಸ್ಲಾಂ ಪಶ್ಚಿಮ ಬಂಗಾಳದಳ ಬಿರ್ಭೂಮ್ ನಿವಾಸಿ.
ಬಂಧಿತರ ಮೊಬೈಲ್‌ಗಳಲ್ಲಿ ಜಿಹಾದಿ ಫೋಟೋಗಳು, ವಿಡಿಯೋಗಳು ಮತ್ತು ಬರಹಗಳು ಪತ್ತೆಯಾಗಿವೆ.
ಬಂಧಿತರು ಉಗ್ರರ ಜಾಲ ವಿಸ್ತರಿಸುವಲ್ಲಿ ಕಾರ್ಯೋನ್ಮುಖರಾಗಿದ್ದು, ಉಗ್ರ ನೇಮಕಾತಿ ಮತ್ತು ಹಣ ಸಂಗ್ರಹಿಸುವಲ್ಲಿ ನಿರತರಾಗಿದ್ದರು ಎಂದು ತಿಳಿದು ಬಂದಿದೆ.
ಬಂಧನಕ್ಕೊಳಗಾಗಿರುವ ಮೂವರು ಬಂಧನ ಭೀತಿಯಿಂದ ತಪ್ಪಿಸಿಕೊಂಡು ಭಾರತದೊಳಗೆ ನುಸುಳಿದ್ದರು ಎಂದು ಎಸ್‌ಟಿಎಫ್ ತಿಳಿಸಿದೆ. ನಾಲ್ವರನ್ನೂ ಇಂದು ಕೋರ್ಟ್‌ಗೆ ಹಾಜರು ಪಡಿಸಲಾಗುತ್ತಿದೆ.