Advertisement

Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ

12:58 AM Jan 05, 2025 | Team Udayavani |

ಮೈಸೂರು: ರಸ್ತೆಗೆ ತಮ್ಮ ಹೆಸರನ್ನಿಡುವ ವಿಷಯ ವಿವಾದದ ಸ್ವರೂಪ ಪಡೆದುಕೊಂಡರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣಮೌನಕ್ಕೆ ಶರಣಾಗಿದ್ದಾರೆ. ರಸ್ತೆಗೆ ತಮ್ಮ ಹೆಸರಿಡಬೇಕು ಎನ್ನುವ ಆಕಾಂಕ್ಷೆ ಬಹುಶಃ ಅವರಿಗೆ ಇರಬಹುದು. ಅದಕ್ಕೇ ಮೌನವಾಗಿದ್ದುಕೊಂಡು ಪಕ್ಷದ ಕಾರ್ಯಕರ್ತರನ್ನು ಮುಂದಿಟ್ಟು ಚಿತಾವಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.

Advertisement

ಸುದ್ದಿಗಾರರೊಂದಿಗೆ “ಪ್ರಿನ್ಸೆಸ್‌ ರಸ್ತೆ’ ನಾಮಕರಣ ವಿವಾದ ಸಂಬಂಧ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಯಾವುದಾರೂ ರಸ್ತೆ ಅಥವಾ ಬಡಾವಣೆಗೆ ತಮ್ಮ ಹೆಸರು ಇಡಬೇಕು ಎನ್ನುವ ಮನಸ್ಸಿದ್ದರೆ ಇಡೀ ರಾಜ್ಯಕ್ಕೇ ಅವರ ಹೆಸರನ್ನು ಇಟ್ಟು ಬಿಡಲಿ ಎಂದು ಲೇವಡಿ ಮಾಡಿದರು. ಹೆಸರಿನ ರಾಜಕಾರಣವನ್ನು ಸಿದ್ದರಾಮಯ್ಯ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌, ಜಿಟಿಡಿಯದು ಗಂಡ- ಹೆಂಡತಿ ಸಂಬಂಧ: ಎಚ್‌ಡಿಕೆ
ಜನತಾದಳದ್ದೂ ಜಿ.ಟಿ. ದೇವೇಗೌಡರದೂ ಗಂಡ-ಹೆಂಡತಿ ಸಂಬಂಧದಂತೆ. ಜಗಳ, ಮುನಿಸು ಇರುತ್ತದೆ. ಹಾಗಂತ ಸಂಬಂಧವೇನೂ ಮುರಿಯುವುದಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಜೆಡಿಎಸ್‌ನಿಂದ ಶಾಸಕ ಜಿಟಿಡಿ ದೂರ ಉಳಿದಿರುವ ವಿಚಾರಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಆಯಾಯ ಸಂದರ್ಭಕ್ಕೆ ತಕ್ಕಂತೆ ಜಿ.ಟಿ. ದೇವೇಗೌಡರು ತಮಗೆ ಅನ್ನಿಸಿದ್ದನ್ನು ಹೇಳುತ್ತಾರೆ. ಅಷ್ಟಕ್ಕೆ ನಮ್ಮ-ಅವರ ಸಂಬಂಧ ಮುಗಿಯಿತು ಎಂದು ಅರ್ಥವಲ್ಲ. ಅವರು ಯಾವ ಪಕ್ಷಕ್ಕೂ ಹೋಗುವುದಿಲ್ಲ. ನಮ್ಮಲ್ಲೇ ನಮ್ಮ ಜತೆಯೇ ಇದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next