Advertisement
ಶನಿವಾರ ಪುರಭವನದಲ್ಲಿ “ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ’ದಲ್ಲಿ ಸಾನಿಧ್ಯ ವಹಿಸಿದ್ದ ಆಶೀರ್ವಚನ ನೀಡಿದ ಅವರು, ವಚನ ಸಾಹಿತ್ಯದಲ್ಲಿನ ತತ್ವಗಳನ್ನು ಬದುಕಿನಲ್ಲಿ ಅನುಷ್ಠಾನಿಸಿದರೆ ಜೀವನದಲ್ಲಿ ಪರಿಪೂರ್ಣತೆ ದೊರೆಯಲು ಸಾಧ್ಯ ಎಂದರು.ವಚನ ಸಾಹಿತ್ಯ, ದಾಸ ಸಾಹಿತ್ಯದಿಂದ ಸಮಾಜದಲ್ಲಿ ಬಹು ದೊಡ್ಡ ಕ್ರಾಂತಿಯಾಗಿದೆ. ಸರಳ ಶಬ್ದಗಳ ಮೂಲಕ ವಚನಗಳು ಜನರ ಮನಮುಟ್ಟಿವೆ ಎಂದ ಅವರು, ನಮ್ಮ ಮಾತು ಮತ್ತೂಬ್ಬರನ್ನು ಕೆರಳಿಸುವಂತಿರಬಾರದು. ಇತರರ ಮಾತಿನಿಂದ ನಾವೂ ಉದ್ವೇಗಕ್ಕೆ ಒಳಗಾಗಬಾರದು. ಸಮಚಿತ್ತದಿಂದ ಬದುಕನ್ನು ಸಾಗಿಸಿದರೆ ಅದೇ ಭಗವಂತನ ಆರಾಧನೆ. ಶಾಸ್ತ್ರಗಳಲ್ಲಿ ಅಡಕವಾಗಿದ್ದ ತತ್ವಗಳನ್ನು ಕಾಲ ಕಾಲಕ್ಕೆ ಶರಣರು, ದಾಸರು ಮನೆ ಮನೆಗೆ ಮುಟ್ಟಿಸಿದರು ಎಂದು ವಿವರಿಸಿದರು.