ರಿಯಾದ್: ಸೌದಿ ಅರೇಬಿಯಾದಲ್ಲಿ ಶನಿವಾರ ಯೋಗಾ ಉತ್ಸವ ನಡೆಸಲಾಗಿದೆ. ದೇಶದಲ್ಲಿ ಮೊದಲ ಬಾರಿ ನಡೆದ ಉತ್ಸವದಲ್ಲೇ ಸಾವಿರಾರು ಜನರು ಭಾಗವಹಿಸಿದ್ದರು.
ಬೆ ಲಾ ಸನ್ ಬೀಚ್‌ನ ಜುಮನ್ ಪಾರ್ಕ್‌ನಲ್ಲಿ ಉತ್ಸವವನ್ನು ಸೌದಿ ಯೋಗಾ ಸಮಿತಿ ಆಯೋಜಿಸಿತ್ತು.
ಸುಮಾರು 1 ಸಾವಿರ ಮಂದಿ ಈ ಉತ್ಸವದಲ್ಲಿದ್ದರು. ಅತಿ ಹೆಚ್ಚು ಪ್ರಮಾಣದಲ್ಲಿ ಯುವಜನತೆಯೇ ಕಾರ್ಯಕ್ರಮದಲ್ಲಿತ್ತು. ಈ ಉತ್ಸವಕ್ಕೂ ಮೊದಲು ಯೋಗಾಭ್ಯಾಸಕ್ಕಾಗಿ ಹಲವು ಯೋಗಾ ಕೇಂದ್ರಗಳಿಂದ ತರಬೇತಿ ನಡೆಸಲಾಗಿತ್ತು. ರಾಷ್ಟ್ರಾದ್ಯಂತ 10 ಸಾವಿರಕ್ಕೂ ಅಧಿಕ ಮಂದಿ ಈ ತರಬೇತಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ರಾಯಪುರದಲ್ಲಿ ಕಾಂಗ್ರೆಸ್ “ಅಮರ ಜವಾನ್ ಜ್ಯೋತಿ’: ಭೂಪೇಶ್ ಬಘೇಲ್
ದೇಶದಲ್ಲಿ ಯೋಗಾ ತರಬೇತಿ ಕೇಂದ್ರಗಳಿಗೆ ಪರವಾನಗಿ ನೀಡಲಾರಂಭಿಸಿದ ಮೇಲೆ ಯೋಗಾ ಹೆಚ್ಚು ಜನರಿಗೆ ತಲುಪಿದ್ದಾಗಿ ಕ್ರೀಡಾ ಸಚಿವರು ತಿಳಿಸಿದ್ದಾರೆ.