Advertisement

Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!

04:35 PM Dec 29, 2024 | Team Udayavani |

ಮಹಾನಗರ: ಗಮನಸೆಳೆಯುವ ಬಣ್ಣ ಬಣ್ಣದ ಮೀನುಗಳು… ನೀರೊಳಗಿನ ಸುಂದರ ಪ್ರಪಂಚವನ್ನು ಕಣ್ಣೆದುರೇ ನೋಡುವ ಅನುಭವ… ಹವಾನಿಯಂತ್ರಿತ ಸುರಂಗದುದ್ದಕ್ಕೂ ಮತ್ಸ್ಯ ಲೋಕದ ಅನಾವರಣ… ಇವು ಗಳನ್ನು ಕಣ್ತುಂಬಿಕೊಳ್ಳಬೇಕಾದರೆ ಲಾಲ್‌ಬಾಗ್‌ನಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ ಆರಂಭಗೊಂಡ ಅಂತರ್ಜಲ ಸುರಂಗ ಮಾರ್ಗ-ಅಕ್ವಾ ಷೋಗೆ ಭೇಟಿ ನೀಡಬೇಕು.

Advertisement

ಫನ್‌ವರ್ಲ್ಡ್ ವತಿಯಿಂದ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಸಂಜೆ 4ರಿಂದ ರಾತ್ರಿ 9 ಗಂಟೆಯವರೆಗೆ ವೀಕ್ಷಣೆಗೆ ಅವಕಾಶ ಇದೆ. ಇಲ್ಲಿನ ಅಂತರ್ಜಲ ಸುರಂಗ ಮಾರ್ಗದಲ್ಲಿ ಹಲವು ಪ್ರಬೇಧದ ಮೀನುಗಳನ್ನು ನೋಡಿ ಆನಂದಿಸಬಹುದು.

ಬೃಹತ್‌ ಸುರಂಗದ ಪ್ರವೇಶ ಪಡೆಯುತ್ತಿದ್ದಂತೆ ಜಲಚರಗಳು 360 ಡಿಗ್ರಿ ನೋಟವನ್ನು ಕಾಣಬಹುದು. ಸುರಂಗದೊಳಗೆ ಅತ್ತಿಂದಿತ್ತ ಸಂಚರಿಸುವ ಮೀನುಗಳು ಪುಳಕಿತಗೊಳಿಸುತ್ತದೆ. ನಾಲ್ಕು ದೊಡ್ಡ ಸುರಂಗಗಳು, 10 ದೊಡ್ಡ ಗಾತ್ರದ ಅಕ್ವೇರಿಯಂ ಅನ್ನು ಕ್ರೇನ್‌ ಮೂಲಕ ತಂದು ಇಲ್ಲಿ ಸ್ಥಾಪಿಸಲಾಗಿದೆ. ನೀರನ್ನು 24 ಗಂಟೆಗಳ ಕಾಲವೂ ಫಿಲ್ಟರ್‌ ಮಾಡಲಾಗುತ್ತಿದ್ದು, ಮೀನುಗಳಿಗೆ ಪ್ರತೀ ದಿನ ಕೋಳಿಯ ಸಣ್ಣ ಸಣ್ಣ ತುಂಡು ಸಹಿತ ಸುಮಾರು 5 ಕೆ.ಜಿ.ಯಷ್ಟು ವಿವಿಧ ಆಹಾರವನ್ನು ಹಾಕಲಾಗುತ್ತದೆ. ಅಕ್ವೇರಿಯಂಗೆ ಲ್ಯಾಮಿನೇಟೆಡ್‌ ಸೇಫ್ಟಿ ಗಾಜು ಹಾಕಲಾಗಿದೆ.

ಕಲರ್‌ಫುಲ್‌ ಮೀನುಗಳು
ಜಲ ಸುರಂಗ ಅಕ್ವಾ ಷೋದಲ್ಲಿ ಆಕರ್ಷಕ ಮೀನುಗಳು ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಸುಮಾರು 10,000 ಚದರ ಅಡಿಗೂ ಅಧಿಕ ವಿಸ್ತೀರ್ಣದಲ್ಲಿ ಸುರಂಗ ಮಾರ್ಗ ಮೀನುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇಲ್ಲಿ ಸಿಂಗಾಪುರ, ಜಪಾನ್‌, ಇಂಡೋನೇಷಿಯಾ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿನ ಏಂಜೆಲ್‌ ಫಿಶ್‌, ಕೋಯಿ, ಸ್ಕಾರ್ಪಿಯನ್‌ ಫಿಶ್‌, ಕೌÉನ್‌ ಫಿಶ್‌, ಸಮುದ್ರ ಕುದುರೆ, ಮೊಸಳೆ ಮೀನು, ಬಾಕ್ಸ್‌ ಫಿಶ್‌, ಕೌಫಿಶ್‌, ಮಹ್‌ಸೀರ್‌ ಸೇರಿದಂತೆ 500ಕ್ಕೂ ಅಧಿಕ ವಿವಿಧ ಜಾತಿಯ ಮೀನುಗಳನ್ನು ಪ್ರದರ್ಶಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next