Advertisement

ಕೋವಿಡ್ 19 ವೈರಸ್ ಉದ್ಯೋಗ ಧಾರಣಾ ಯೋಜನೆ ವಿಸ್ತರಣೆ

10:58 PM Apr 19, 2020 | Hari Prasad |

ಲಂಡನ್: ಬೋರಿಸ್ ಜಾನ್ಸನ್ ಸರಕಾರದ ಕೋವಿಡ್ 19 ವೈರಸ್ ಉದ್ಯೋಗ ಧಾರಣಾ ಯೋಜನೆಯನ್ನು 1 ತಿಂಗಳು ವಿಸ್ತರಿಸಿ ಬ್ರಿಟನ್‌ ಹಣಕಾಸು ಸಚಿವ ರಿಶಿ ಸುನಕ್‌ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

Advertisement

ಕೋವಿಡ್ 19 ವೈರಸ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ಬಲವಂತದ ರಜೆ ಮೇಲೆ ಕಳುಹಿಸುವುದನ್ನು ತಡೆಯಲು ಮಾರ್ಚ್‌ನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು.

ಈ ಸಂಕಷ್ಟದ ಸಮಯದಲ್ಲಿ ಉದ್ಯೋಗಿಗಳಿಗೆ ಜೀವನೋಪಾಯ ಕಲ್ಪಿಸಲು ಹಾಗೂ ಉದ್ಯಮ ಬೆಂಬಲಿಸಲು ಮತ್ತು ಆರ್ಥಿಕ ಪುನಶ್ಚೇತನಕ್ಕೆ ಪ್ರೋತ್ಸಾಹ ನೀಡಲು ಉದ್ಯೋಗ ಧಾರಣಾ ಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ.

ಗುರುವಾರ ಲಾಕ್‌ ಡೌನ್‌ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಒಂದು ತಿಂಗಳ ಕಾಲ, ಜೂನ್‌ವರೆಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು. ಈ ಯೋಜನೆ, ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ಬಲವಂತವಾಗಿ ರಜೆ ಮೇಲೆ ಕಳುಹಿಸುವುದನ್ನು ಅಥವಾ ಕೆಲಸದಿಂದ ತೆಗೆದುಹಾಕುವುದನ್ನು ತಡೆಯುತ್ತದೆ. ಉದ್ಯೋಗಿಗಳಿಗೆ ಅವರ ವೇತನದ ಶೇ.80ರಷ್ಟು ಹಣವನ್ನು (ಗರಿಷ್ಠ 2,500 ಪೌಂಡ್‌ವರೆಗೆ) ಸಕಾರವೇ ಭರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next