Advertisement

ಜಗತ್ತಿಗೆ ಭಯ ಮೂಡಿಸಿದ ಹೊಸ ವೈರಸ್‌; ಕೋವಿಡ್‌ ಬಳಿಕ ಮತ್ತೊಂದು ವೈರಸ್‌ ಆತಂಕ

11:59 PM Jan 03, 2025 | Team Udayavani |

ಜಗತ್ತನ್ನು 5 ವರ್ಷಗಳ ಕಾಲ ಕಾಡಿದ ಕೋವಿಡ್‌ ಸೋಂಕಿನ ಬಳಿಕ, ಚೀನದಲ್ಲಿ ಮತ್ತೊಂದು ವೈರಸ್‌ ಕಾಣಿಸಿಕೊಂಡಿದೆ ಎಂಬ ವರದಿಗಳು ಇಡೀ ಜಗತ್ತಿಗೆ ಭಯ ಮೂಡಿಸಿದೆ. ಹೆಚ್ಚಿನ ಸಂಖ್ಯೆಯ ಜನ ಈ ಎಚ್‌ಎಂಪಿವಿ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಏನಿದು ಸೋಂಕು, ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂಬೆಲ್ಲ ವಿವರಗಳು ಇಲ್ಲಿವೆ.

Advertisement

ಏನಿದು ಎಚ್‌ಎಂಪಿವಿ?
ಹ್ಯೂಮನ್‌ ಮೆಟಾನ್ಯುಮೋ ವೈರಸ್‌ (ಎಚ್‌ಎಂಪಿವಿ) ಎಂದು ಕರೆಯಲ್ಪಡುವ ಈ ವೈರಸ್‌, ಶ್ವಾಸಕೋಶಕ್ಕೆ ಸಂಬಂಧಿಸಿದ ಸೋಂಕನ್ನು ಹರಡುತ್ತದೆ. ಎಲ್ಲ ವಯೋಮಾನದವರಲ್ಲೂ ಈ ಸೋಂಕು ಕಂಡುಬಂದರೂ ಮಕ್ಕಳು ಮತ್ತು ಅನಾರೋಗ್ಯ ಹೊಂದಿರುವ ಹಿರಿಯರಲ್ಲಿ ಇದು ಹೆಚ್ಚಿನ ತೊಂದರೆಯನ್ನುಂಟು ಮಾಡುತ್ತದೆ.

ಎಚ್‌ಎಂಪಿವಿ ಹೇಗೆ ಹರಡುತ್ತದೆ?

ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಸೀನು ಮತ್ತು ಕೆಮ್ಮಿನ ಮೂಲಕ ಗಾಳಿ ಮುಖಾಂತರ ಇದು ಮತ್ತೂಬ್ಬ ವ್ಯಕ್ತಿಗೆ ಹರಡುತ್ತದೆ. ಕೈ ಕುಲುಕುವುದರಿಂದ, ಕಲುಷಿತ ಸ್ಥಳಗಳನ್ನು ಮುಟ್ಟಿದ ಬಳಿಕ ಮೂಗು, ಬಾಯಿ ಮುಟ್ಟಿಕೊಳ್ಳುವ ಮೂಲಕ ಈ ಸೋಂಕು ಹರಡುತ್ತದೆ.

ಈ ಸೋಂಕಿನ ಲಕ್ಷಣಗಳೇನು?
ಈ ಸೋಂಕಿಗೆ ತುತ್ತಾದವರು ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಉಬ್ಬಸ, ಉಸಿರಾಟ ತೊಂದರೆಗೆ ತುತ್ತಾಗಲಿದ್ದಾರೆ.

ಸೋಂಕು ತಡೆಗಟ್ಟುವುದು ಹೇಗೆ?

ಕೋವಿಡ್‌ ಸೋಂಕು ಕಾಣಿಸಿಕೊಂಡಿದ್ದ ಸಮಯದಲ್ಲಿ ಆಚರಣೆಗೆ ತಂದಿದ್ದ, ಆಗಾಗ್ಗೆ ಕೈ ತೊಳೆಯುವುದು, ತೊಳೆಯದ ಕೈಗಳಲ್ಲಿ ಮೂಗು ಮುಟ್ಟದಿರುವುದು, ಸೋಂಕಿಗೆ ತುತ್ತಾಗಿರುವವರಿದಂದ ಅಂತರ ಕಾಯ್ದುಕೊಳ್ಳುವುದರ ಮೂಲಕ ಸೋಂಕು ಹರಡದಂತೆ ತಡೆಗಟ್ಟಬಹುದು.

ಈ ವೈರಸ್‌ಗೆ ಲಸಿಕೆ ಇದೆಯೇ?
2001ರಲ್ಲಿ ಮೊದಲ ಬಾರಿಗೆ ಈ ವೈರಸ್ಸನ್ನು ಗುರುತಿಸಲಾಗಿತ್ತು. ಆದರೂ ಇಲ್ಲಿಯವರೆಗೆ ಇದಕ್ಕೆ ಯಾವುದೇ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿಲ್ಲ. ರೋಗ ಲಕ್ಷಣಗಳಿಗೆ ನೀಡುವ ಔಷಧವನ್ನೇ ಇದಕ್ಕೆ ನೀಡಲಾಗುತ್ತದೆ.

ಇದು ಸಾಮಾನ್ಯ: ಚೀನ
ಕೋವಿಡ್‌ ಮಾದರಿ ಸೋಂಕು ಹರಡುತ್ತಿದೆ ಎಂಬು­ದನ್ನು ಚೀನ ಸರಕಾರ‌ ಅಲ್ಲಗಳೆದಿದೆ. ಅಲ್ಲದೇ ಚಳಿ­ಗಾಲದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಸಾಮಾನ್ಯ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಸೋಂಕಿನ ಪ್ರಮಾಣ ಕಡಿಮೆ ಇದೆ. ವಿದೇಶಿ ಗರು ಧೈರ್ಯವಾಗಿ ಚೀನಕ್ಕೆ ಆಗಮಿಸಬಹುದು ಎಂದು ಚೀನ ಸರಕಾರ‌ ಹೇಳಿದೆ.

Advertisement

ಏಷ್ಯಾದಲ್ಲಿ ಕಟ್ಟೆಚ್ಚರ
ಚೀನದಲ್ಲಿ ಹೊಸ ವೈರಸ್‌ ಕಾಣಿಸಿಕೊಂಡ ಹಿನ್ನೆಲೆ­ಯಲ್ಲಿ ಏಷ್ಯಾ ಖಂಡದ ಬಹುತೇಕ ರಾಷ್ಟ್ರಗಳು
ಕಟ್ಟೆ­ಚ್ಚರ ಕೈಗೊಂಡಿವೆ. ಜಪಾನ್‌, ಮ್ಯಾನ್ಮಾರ್‌, ವಿಯೆಟ್ನಾಂ, ಲಾವೋಸ್‌ ದೇಶಗಳು ಎಚ್ಚರ ವಹಿಸುವಂತೆ ಸೂಚನೆ ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next