Advertisement
ಸಚಿನ್ ತೆಂಡೂಲ್ಕರ್ ಅವರ ನಿವೃತ್ತಿಯ ನಂತರ ಭಾರತೀಯ ಬ್ಯಾಟಿಂಗ್ನ ಅಗ್ರ ಆಟಗಾರ ಕೊಹ್ಲಿ, ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ತಂಡದಲ್ಲಿ ಅವರ ಸ್ಥಾನದ ಕುರಿತು ಪ್ರಶ್ನೆ ಮೂಡಿದೆ.
Related Articles
Advertisement
ಭಾರತ ಫೆಬ್ರವರಿ 6 ರಿಂದ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ನಂತರ ಚಾಂಪಿಯನ್ಸ್ ಟ್ರೋಫಿ (ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ) ಆಡಲಿದ್ದು, ನಂತರ ಮಾರ್ಚ್ 14 ರಂದು IPL ಪ್ರಾರಂಭವಾಗುತ್ತದೆ.
ಸೂಪರ್ಸ್ಟಾರ್ ಸಂಸ್ಕೃತಿ ಬೇಡ”ನಾವು ಸೂಪರ್ಸ್ಟಾರ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕು, ನಮಗೆ ತಂಡದ ಸಂಸ್ಕೃತಿ ಬೇಕು. ನೀವು ನಿಮ್ಮನ್ನು ಸುಧಾರಿಸಿಕೊಳ್ಳಬೇಕು ಮತ್ತು ಭಾರತ ತಂಡವನ್ನು ಸುಧಾರಿಸಬೇಕು. ಈ ಸರಣಿಯ ಮೊದಲು ಪಂದ್ಯಗಳು ಸಹ ಇದ್ದವು ಮತ್ತು ಅವರಿಗೆ ದೇಶೀಯ ಕ್ರಿಕೆಟ್ ಆಡಲು ಅವಕಾಶವಿತ್ತು, ಆದರೆ ಅವರು ಮಾಡಲಿಲ್ಲ. ನಾವು ಆ ಸಂಸ್ಕೃತಿಯನ್ನು ಬದಲಾಯಿಸಬೇಕಾಗಿದೆ” ಎಂದು ಮಾಜಿ ವೇಗಿ ಇರ್ಫಾನ್ ಪಠಾಣ್ ಸ್ಟಾರ್ ಸ್ಪೋರ್ಟ್ಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಭಾರತ ತಂಡವು ತನ್ನ ಹಿರಿಯ ಆಟಗಾರನನ್ನ ಉಳಿಸಿಕೊಳ್ಳಲು ಅರ್ಹವಾಗಿದೆಯೇ? ಬದಲಾಗಿ, ಯುವ ಆಟಗಾರನಿಗೆ ಅವಕಾಶ ನೀಡಬೇಕು. ಇದು ತಂಡದ ಬಗ್ಗೆ ಹೇಳಿದ್ದು ಹೊರತು ವ್ಯಕ್ತಿಗಲ್ಲ. ಕೊಹ್ಲಿ ಸುಧಾರಿಸಲು ಗಂಭೀರವಾಗಿ ಪರಿಗಣಿಸಿದ್ದಾರೆ” ಎಂದು ಪಠಾಣ್ ಪ್ರಶ್ನಿಸಿದ್ದಾರೆ.