Advertisement

ದೋಷಯುಕ್ತ EVMನಿಂದ ಕಮಲ ಬ್ರಿಟನ್‌, ಅಮೆರಿಕದಲ್ಲೂ ಅರಳೀತು: ಶಿವ ಸೇನೆ

05:42 AM Feb 11, 2019 | Team Udayavani |

ಮುಂಬಯಿ : ‘ದೋಷಯುಕ್ತ EVM ಬಳಸಲ್ಪಟ್ಟಲ್ಲಿ ಭಾರತೀಯ ಜನತಾ ಪಕ್ಷದ ಕಮಲ, ಲಂಡನ್‌, ಅಮೆರಿಕದಲ್ಲಿ ಕೂಡ ಅರಳುವುದು ಸಾಧ್ಯವಿದೆ’ ಎಂದು ಬಿಜೆಪಿಯ ಪರಿತ್ಯಕ್ಷ ಮಿತ್ರ ಪಕ್ಷ ಶಿವ ಸೇನೆ ಕಟಕಿಯಾಡಿದೆ.

Advertisement

‘ಭಾರತೀಯ ಜನತಾ ಪಕ್ಷದ ನಾಯಕರಲ್ಲಿ ಅತಿಯಾದ ಆತ್ಮ ವಿಶ್ವಾಸ, ತೀವ್ರವಾಗಿ ಸಾಗುತ್ತಿರುವ ರಫೇಲ್‌ ವಿವಾದ, ದೋಷಯುಕ್ತ ಇವಿಎಂ ಗಳು, ಬಿಜೆಪಿ ನಾಯಕರ ಲಂಗು ಲಗಾಮಿಲ್ಲದ ಬೇಜವಾಬ್ದಾರಿಯ ಹೇಳಿಕೆಗಳೇ ಮೊದಲಾದ ಹಲವಾರು ವಿಷಯಗಳು  ಬಿಜೆಪಿಗೆ  ಮುಂಬಯಿ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿಗೆ ತಿರುಗುಬಾಣವಾಗಲಿದೆ’ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಎಚ್ಚರಿಸಿದರು.

‘ಮಹಾರಾಷ್ಟ್ರದ ಒಟ್ಟು  48 ಲೋಕಸಭಾ ಸ್ಥಾನಗಳ ಪೈಕಿ 43 ಸ್ಥಾನಗಳನ್ನು ಗೆಲ್ಲುವ ಅತಿಯಾದ ಆತ್ಮವಿಶ್ವಾಸ ಬಿಜೆಪಿ ನಾಯಕರಲ್ಲಿದೆ.  ಹಾಗಾಗಿ ಅದು ಚುನಾವಣಾ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಹೋರಾಡುವ ಭಂಡತನ ತೋರುತ್ತಿದೆ. ಅದರ ಈ ನಿಲುವು ಪಕ್ಷಕ್ಕೆ ಮುಳುವಾಗಲಿದೆ’ ಎಂದು ಠಾಕ್ರೆ ಹೇಳಿದರು. 

‘ಅಯೋಧ್ಯೆಯಲ್ಲಿ ಬಿಜೆಪಿಯ ಕಮಲ ಏಕೆ ಅರಳಲಿಲ್ಲ?’ ಎಂದು ಠಾಕ್ರೆ ವ್ಯಂಗ್ಯದಿಂದ ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next