Advertisement

Modi ಬಂದಾಗಲಷ್ಟೇ ಮಹಾರಾಷ್ಟ್ರ ಅಸುರಕ್ಷಿತ: ಉದ್ಧವ್‌ ಸೇನೆ ಟಾಂಗ್‌

02:08 AM Nov 10, 2024 | Team Udayavani |

ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರ ಏಕ್‌ ಹೇ ತೋ ಸೇಫ್ ಹೇ (ಒಂದಾಗಿದ್ದರೆ ಸುರಕ್ಷಿತ ವಾಗಿರುತ್ತೇವೆ) ಎಂಬ ಹೇಳಿಕೆಯನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ್‌ ರಾವತ್‌ ಟೀಕಿಸಿದ್ದಾರೆ. “ಬಿಜೆಪಿಯ ಈ ಹಿಂದಿನ “ಬಟೇಂಗೆ ತೋ ಕಟೇಂಗೆ’ (ಒಂದಾಗಿ ಇರದಿದ್ದರೆ ಛಿದ್ರವಾಗುತ್ತೇವೆ) ಎಂಬ ಘೋಷಣೆ ವಿಫ‌ಲವಾದ ಹಿನ್ನೆಲೆಯಲ್ಲಿ ಈ ನೂತನ ಘೋಷಣೆಯನ್ನು ಅವರು ಪ್ರಯೋಗಿಸುತ್ತಿದ್ದಾರೆ. ಆದರೆ ಮಹಾರಾಷ್ಟ್ರದ ಜನತೆ ಈಗಾಗಲೇ ಸುರಕ್ಷಿತವಾಗಿದ್ದಾರೆ’ ಎಂದು ಅವರು ಪ್ರತಿಪಾದಿಸಿದ್ದಾರೆ. ಅಲ್ಲದೇ “ವಿಭಜನೆ ಮತ್ತು ಅಶಾಂತಿಯನ್ನು ಪ್ರಚೋದಿಸುವ ಮೋದಿ ಭೇಟಿ ನೀಡಿದಾಗಲೆಲ್ಲ ನಮ್ಮ ರಾಜ್ಯವು ಅಸುರಕ್ಷಿತವಾಗುತ್ತದೆ. ಆದ್ದರಿಂದ ಸುರಕ್ಷೆಯನ್ನು ಖಾತ್ರಿಪಡಿಸಲು ನಾವು ಬಿಜೆಪಿಯನ್ನು ಕಿತ್ತೂಗೆಯಬೇಕಾಗಿದೆ’ ಎಂದೂ ರಾವತ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next