Advertisement
ಜಿ20 ಶೃಂಗಸಭೆ ಬಳಿಕ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ವ್ಯಾಪಾರ ಒಪ್ಪಂದ, ಭದ್ರತೆ, ಶಿಕ್ಷಣ, ತಂತ್ರಜ್ಞಾನ, ಹವಾಮಾನ ಬದಲಾವಣೆಯಂತಹ ಕ್ಷೇತ್ರಗಳಲ್ಲಿ ಸಮಗ್ರ ಸಹಕಾರ ಒಳಗೊಂಡಂತೆ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ನಾವು ಬಯಸುತ್ತಿದ್ದೇವೆ ಎಂದು ಬ್ರಿಟನ್ ಹೇಳಿದೆ.
Related Articles
Advertisement
ಹಲವು ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ
ಶೃಂಗಸಭೆಯ ಬಳಿಕ ಪ್ರಧಾನಿ ಮೋದಿ ಅವರು ಹಲವು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಿಕ್ಷಣ, ಭದ್ರತೆ, ವ್ಯಾಪಾರ, ತಂತ್ರಜ್ಞಾನ, ಆರೋಗ್ಯ, ಹವಾಮಾನ ಬದಲಾವಣೆಯಂತಹ ಕ್ಷೇತ್ರಗಳಲ್ಲಿ ಸಮಗ್ರ ಸಹಕಾರದ ಬಗ್ಗೆ ಚರ್ಚಿಸ ಲಾ ಗಿದೆ. ಇಟಲಿ, ಇಂಡೋನೇಷ್ಯಾ, ನಾರ್ವೆ, ಪೋರ್ಚುಗಲ್, ಈಜಿಪ್ಟ್, ದಕ್ಷಿಣ ಕೊರಿಯಾ, ಫ್ರಾನ್ಸ್ ದೇಶಗಳ ಮುಖ್ಯಸ್ಥರು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಗೀತಾ ಗೋಪಿನಾಥ್, ಐರೋಪ್ಯ ಒಕ್ಕೂಟದ ಮುಖ್ಯಸ್ಥರನ್ನು ಮೋದಿ ಭೇಟಿ ಮಾಡಿದರು.
ಹಸಿವು ನಿರ್ಮೂಲನೆ, ಗಾಜಾಗೆ ಹೆಚ್ಚಿನ ನೆರವು: ಜಿ20 ನಿರ್ಣಯ
ಜಾಗತಿಕವಾಗಿ ಹಸಿವು ನಿಯಂತ್ರಣ ಹಾಗೂ ಗಾಜಾಗೆ ಹೆಚ್ಚಿನ ನೆರವು ಒದಗಿಸುವ ಜಾಗತಿಕ ಒಪ್ಪಂದಕ್ಕೆ ಜಿ20 ನಾಯಕರು ಕರೆ ನೀಡಿದರು. ಅಲ್ಲದೇ ಜಾಗತಿಕವಾಗಿ ನಡೆಯುತ್ತಿರುವ ಯುದ್ಧಗಳನ್ನು ಖಂಡಿಸಿದ ನಾಯಕರು ಇದನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಒಪ್ಪಂದ ಮಾಡಿಕೊಂಡರು. ಇದೇ ವೇಳೆ ಉಕ್ರೇನ್ ಸಾರ್ವಭೌಮತೆಯ ಪರವಾಗಿ ಅಮೆರಿಕ ತನ್ನ ನಿಲುವನ್ನು ಪ್ರದರ್ಶಿಸಿತು.