Advertisement
ಅ.29ರಂದು ಪ್ರಧಾನಿಗಳ ಅಧಿಕೃತ ನಿವಾಸದಲ್ಲಿ ದೀಪಾವಳಿ ಪಾರ್ಟಿ ಆಯೋಜಿಸ ಲಾಗಿತ್ತು. ಈ ಪಾರ್ಟಿಯಲ್ಲಿ ಪ್ರಾರ್ಥನೆ, ಹಣತೆಗಳ ಬೆಳಗುವಿಕೆ, ಪ್ರಧಾನಿಗಳ ಭಾಷಣ ಮತ್ತು ಸಾಂಪ್ರದಾಯಿಕ ಭಾರತೀಯ ನೃತ್ಯವನ್ನು ಏರ್ಪಡಿಸಲಾಗಿತ್ತು. ಜತೆಗೆ ಅತಿಥಿಗಳಿಗೆ ಕುರಿ ಕಬಾಬ್, ಮೀನು, ಬಿಯರ್, ವೈನ್ ಬಡಿಸಲಾಗಿದೆ. ಈ ವೇಳೆ ಕೆಲ ಅತಿಥಿಗಳು ತಮ್ಮ ಅಕ್ರೋಶವನ್ನು ಅಲ್ಲಿಯೇ ಕೆಟರಿಂಗ್ ಸಿಬಂದಿ ವಿರುದ್ಧ ತೋರಿಸಿದ್ದಾರೆ. ಆದರೆ ಅವರು ಆರ್ಡರ್ ಮಾಡಿರುವುದನ್ನು ಬಡಿಸಿರುವುದಾಗಿ ಹೇಳಿದ್ದಾರೆ. ದೀಪಾ ವಳಿ ಧಾರ್ಮಿಕ ಮಹತ್ವವನ್ನೂ ಹೊಂದಿದೆ. ಹೀಗಾಗಿ ಸಾತ್ವಿಕ ಆಹಾರ ಬಡಿ ಸಬೇಕಿತ್ತು. ಮುಂದೆ ಮಾಂಸಾಹಾರ, ಮದ್ಯ ಉಣಬಡಿಸುವುದಾದರೆ ದೀಪಾ ವಳಿ ಪಾರ್ಟಿಯನ್ನೇ ಆಯೋಜಿಸುವುದು ಬೇಡ ಎಂದು ಆಕ್ರೋಶ ಹೊರ ಹಾಕಲಾಗಿದೆ. ಇದಕ್ಕೆ ಬ್ರಿಟನ್ ಪ್ರಧಾನಿ ಕಾರ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. Advertisement
Britain PM; ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಹಿಂದೂಗಳ ಆಕ್ರೋಶ
01:03 AM Nov 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.