Advertisement
ಈ ಮೊದಲು ಆಸ್ತಿಯ ಋಣಭಾರ ಪತ್ರವನ್ನು ಸಬ್ ರಜಿಸ್ಟರ್ ಆಫೀಸಿನಲ್ಲಿ ಪೂರೈಸುತ್ತಿದ್ದರು. ಆನ್ ಲೈನ್‌ನಲ್ಲಿ ಅರ್ಜಿ ಹಾಕಿ ತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ಇದು ದುಸ್ತರವಾಗಿದ್ದು, ಕಚೇರಿ, ಬ್ಯಾಂಕ್‌ಗಳಿಗೆ ಆಲೆಯುವುದು ತಪ್ಪಿಲ್ಲ. ಆಸ್ತಿಯ ಋಣಭಾರಕ್ಕೆ ಒಂದು ತಿಂಗಳಿಂದ ಅಲೆದಾಡುತ್ತಿದ್ದೇನೆ. ಸಬ್ ರಜಿಸ್ಟರ್ ಕಾರ್ಯಾಲಯದಲ್ಲಿ ಆನ್‌ಲೈನ್ ಮಾಡಬೇಕೆಂದು ಅರ್ಜಿ ತೆಗೆದುಕೊಳ್ಳಲಿಲ್ಲ. ನಂತರ ಪ್ರಯತ್ನಿಸಿದರೂ ಸರ್ವರ್ ಸಮಸ್ಯೆಯಿಂದ ಆಸ್ತಿಯ ಋಣಭಾರ(ಇ.ಸಿ)ಸಿಗಲಿಲ್ಲ. ಸಬ್ ರಜಿಸ್ಟರ್ ಕಾರ್ಯಾಲಯದಲ್ಲಿ ಸೋಮವಾರ ಅರ್ಜಿ ತೆಗೆದುಕೊಂಡಿದ್ದು, ಜೂ.17ಕ್ಕೆ ನನಗೆ ಆಸ್ತಿಯ ಋಣಭಾರ ಪೂರೈಸಲಾಗುವುದೆಂದು ಹೇಳಿದ್ದಾರೆ ಎನ್ನುತ್ತಾರೆ ಅಳಗವಾಡಿ ರೈತ ಎಸ್.ಐ.ಹಿರೇಮಠ. ಬ್ಯಾಂಕ್ ಸಾಲ ಪಡೆದು ಬೀಜ, ಗೊಬ್ಬರ ಇತರೆ ಖರ್ಚು ಮಾಡಬೇಕೆಂದರೆ ಅಸಲು ಬಡ್ಡಿ ಕಟ್ಟಿದರೆ ಮಾತ್ರ ಸಾಲ ಸಿಗುತ್ತದೆ. ಇಲ್ಲವಾದರೆ ಸಾಲ ಇಲ್ಲವೇ ಇಲ್ಲ. ಬ್ಯಾಂಕ್‌ನಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ.ಅವರು ಹೇಳಿದ ರೈತರಿಗೆ ಹೆಚ್ಚಿನ ಸಾಲ ಸಿಗುತ್ತದೆ. ಸಾಮಾನ್ಯ ರೈತರು ಬ್ಯಾಂಕ್ ಅಧಿ ಕಾರಿಗಳ ಹತ್ತಿರ ಹೋದರೆ ನಿಯಮಗಳನ್ನು ಹೇಳಿ ಕಳಿಸುತ್ತಾರೆ. ಬಡ್ಡಿ ತೆಗೆದುಕೊಂಡು ಸಾಲ ಮರು ಚಾಲನೆ ಸಹ ಮಾಡುತ್ತಿಲ್ಲ ಇದರಿಂದ ರೈತನ ಪರಿಸ್ಥಿತಿ ತುಂಬಾ ಕಷ್ಟವಾಗಿದೆ ಎನ್ನುತ್ತಾರೆ ಅಳಗವಾಡಿ ರೈತ ಬಸಣ್ಣ ಬೆಳವಣಕಿ.
Related Articles
Advertisement