ಎರಡು ವರ್ಷದ ಸ್ನಾತಕೋತ್ತರ ಪದವಿ ಇನ್ನೇನು ಕೆಲವೇ ದಿನಗಳಿವೆ ಅಷ್ಟೇ. ಜೀವನದ ಇನ್ನೊಂದು ಹಂತಕ್ಕೆ ತಯಾರಾಗಿ ನಿಲ್ಲುವುದೇನು ಸಹ ದೂರವಿಲ್ಲ. ಈ ಎರಡು ವರ್ಷಗಳಲ್ಲಿ ನಮ್ಮ ಜೊತೆ ಉಳಿಯುವುದೆಂದರೆ ಕಥೆಗಳಾದ ನೆನಪುಗಳು ಮಾತ್ರ. ಈಗಾಗಲೇ ನಮ್ಮನ್ನು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಿಂದ ಹೊರಹಾಕಲು ನಮ್ಮ ಜ್ಯೂನಿಯರ್ ತುದಿಗಾಲಲ್ಲಿ ನಿಂತಿದ್ದಾರೆ. ನಮಗೆ ವಿದಾಯ ಹೇಳಿ ಸೀನಿಯರ್ ಪಟ್ಟವನ್ನು ಗಿಟ್ಟಿಸಲು ಆತುರದಿಂದ ಕಾಯುತ್ತಿದ್ದಾರೆ ಎಂದೆನಿಸುತ್ತದೆ.
ಈಗಾಗಲೇ ಒಂದು ಕಾಲನ್ನು ಹೊರಗಡೆ ಇಟ್ಟ ನಮಗೆ ಇನ್ನೊಂದು ಕಾಲು ಮಾತ್ರ ಕ್ಯಾಂಪಸ್‌ನಲ್ಲಿ ಉಳಿಯುವುದಕ್ಕೆ ಅವಕಾಶ ನೀಡಿದೆ. ಈ ಎರಡು ವರ್ಷದ ನೆನಪುಗಳು ಕಾಲೇಜು ಜೀವನ ವಿವರಿಸುವ ಸಿನಿಮಾದೊಂದಿಗೆ ಹಾದು ಹೋಗಿ ಕಣ್ಣಲ್ಲಿ ನೀರು ಜಿನುಗಿದ್ದವು. ಇನ್ನೇನು ಕೆಲವೇ ದಿನ ಅಷ್ಟೇ. ಆ ನಂತರ ಯಾರ್ಯಾರು ಎಲ್ಲಿ ಹೋಗ್ತಿàವೋ ಯಾವ ಮಾರ್ಗವನ್ನು ತುಳಿಯುತ್ತೇವೋ ಗೊತ್ತಿಲ್ಲ. ಆದರೂ ಮುಂದೆ ಬರುವ ವಿದಾಯದ ಕ್ಷಣವನ್ನೊಮ್ಮೆ ನೆನಪಿಸಿಕೊಂಡರೆ ಮುಖದಲ್ಲಿ ಬೇಸರವಂತೂ ಕಾಣುತ್ತಿದೆ.
ಕಾಲೇಜು ಲೈಫ್ನ ಕೊನೆಯ ಹಂತದಲ್ಲಿರುವ ನಮಗೆ ಕ್ಲಾಸ್‌ರೂಂನ ಬೆಂಚ್‌ಗಳು ಸದಾ ಕಾಡುತ್ತಿರುತ್ತವೆ. ಕ್ಲಾಸ್ ಬೋರಾದಾಗ ನಮ್ಮ ಕ್ರಿಯೇಟಿವಿಟಿ ಮೂಡುವ ಜಾಗವೇ ಅದು. ಇನ್ನು ಕಾರಿಡಾರ್ ಅನ್ನು ನೆನಪಿಸಿಕೊಂಡರೆ ಎಲ್ಲಾ ಒಟ್ಟಿಗೆ ನಿಂತು ಸೆಲ್ಫಿà ತೆಗೆದುಕೊಂಡಿದ್ದು, ನೋಟಿಸ್ ಬೋರ್ಡ್ ನೋಡುತ್ತಾ ನಿಂತು ಸರ್‌ಗಳು ಬಂದಾಗ ಕ್ಲಾಸ್‌ಗೆ ಓಡಿಹೋಗಿ ಅವರ ಹತ್ತಿರ ಬೈಸಿಕೊಂಡಿದ್ದು, ಕ್ಲಾಸ್‌ಗೆ ಲೇಟಾಗಿ ಬಂದಾಗ ನಮಗೆ ಆಶ್ರಯ ನೀಡಿದ್ದು ಇದೇ ಕಾರಿಡಾರ್ ಎಂದರೆ ಯಾವುದೇ ತಪ್ಪಿಲ್ಲ.
ನಮ್ಮ ಕೂಗಾಟ, ಹಾರಾಟಗಳಿಗೆಲ್ಲ ಮುಖಸಾಕ್ಷಿಯಾಗಿ ಕಾರಿಡಾರ್ ನಿಂತಿದೆ. ಇನ್ನು ಲ್ಯಾಬ್ ನಮ್ಮ ಹುಡುಗಾಟಗಳಿಗೆಲ್ಲ ಒಂದು ನೆಲೆಯಾಗಿದ್ದಂತೂ ನಿಜ. ಇಷ್ಟು ಬಿಟ್ಟರೇ ನೆನಪಲ್ಲಿರುವುದು ಲೆಕ್ಚರರ್ ಮಾಡಿದ ಪಾಠವಲ್ಲ ಲೆಕ್ಚರರ್ಗಳೇ. ಇವೆಲ್ಲವನ್ನು ಬಿಟ್ಟರೆ ನಮ್ಮ ಜೊತೆ ಯಾರೂ ಅಂತ ಗೊತ್ತಿಲ್ಲದೇ ಇರುವ ಹೊಸ ಮುಖಗಳನ್ನು ಹೊಸ ಅನುಬಂಧದಲ್ಲಿ ಕಟ್ಟಿ ಹಾಕಿಕೊಂಡ ಸ್ನೇಹಿತರು.
ಫಸ್ಟ್ ಕ್ಲಾಸ್‌ಗೆ ಯಾವಾಗ್ಲೂ ಲೇಟಾಗಿ ಹೋಗುವ ನಮಗೆ ಲೇಟ್ ಕಮರ್ ಅಂತ ಬಿರುದು ಸಿಕ್ಕಿತ್ತು. ಇದರಿಂದ ಅಟೆಂಡೆನ್ಸ್ ಕಡಿಮೆಯಾಗಿ ನಕಲಿ ಮೆಡಿಕಲ್ ಸರ್ಟಿಫಿಕೇಟ್ ತಂದು ಎಕ್ಸಾಂಗೆ ಕೂತಿದ್ದೂ ಆಯಿತು. ಪಾಸ್ ಆಗಿದ್ದು ಆಯಿತು. ಮೂರು ಸೆಮ್ ಪಾಸಾದವರಿಗೆ ಲಾಸ್ಟ್ ಸೆಮ್ ಪಾಸಾಗೋದು ದೊಡ್ಡ ವಿಷಯ ಏನಲ್ಲ. ಇದರ ಮಧ್ಯೆ ನಮ್ಮ ಜೀವ ಹಿಂಡೋದು ಡೆಸರೆràಷನ್ ಮತ್ತು ಪ್ರೊಜೆಕ್ಟ್.
ಅದನ್ನು ಹೇಗೋ ಮುಗಿಸಿದರೆ ಸ್ನಾತಕೋತ್ತರ ಪದವೀಧರರು ಎಂಬ ಬೋರ್ಡ್ ಸಿಗುತ್ತದೆ. ಇನ್ನು ಫ್ರೆಂಡ್ಸ್ ಜೊತೆ ಟೂರ್ ನೆಪದಲ್ಲಿ ಅವರ ಮನೆಗೆ ಹೋಗಿದ್ದು, ಕ್ರಿಕೆಟ್ ಆಡಿದ್ದು, ಸೀನಿಯರ್‌ಗಳ ಜೊತೆ ಕಿರಿಕ್, ಜೂನಿಯರ್ಗೆ ಗೈಡಾಗಿದ್ದು, ಕ್ಯಾಂಟೀನ್‌ಗಳಲ್ಲಿ ಗಂಟೆಗಟ್ಟಲೆ ಹರಟಿದ್ದು, ಫ್ರೆಂಡ್ಸ್ ಬರ್ತ್‌ಡೇ ಕೇಕ್ ತಿಂದಿದ್ದು, ಬೈಸ್ಕೊಂಡಿದ್ದು, ಕೆಲವೊಂದು ಸ್ಟ್ರೈಕ್‌ಗಳಲ್ಲಿ ಭಾಗವಹಿಸಿದ್ದು, ಕ್ಯಾಮೆರಾ ಹಿಡಿದುಕೊಂಡು ಓಡಾಡಿದ್ದು, ಫೆಸ್ಟ್‌ಗಳಲ್ಲಿ ಗೆದ್ದಾಗ ಸಂಭ್ರಮಿಸಿದ್ದು, ಆತ್ಮೀಯ ಸ್ನೇಹಿತರೊಂದಿಗೆ ಜಗಳವಾಡಿ ತಿಂಗಳುಗಟ್ಟಲೇ ಮಾತು ಬಿಟ್ಟಿದ್ದು, ಫಸ್ಟ್ ಕ್ರಷ್, ಲವ್‌ಗಳೆಲ್ಲವೂ ಈಗ ನೆನಪುಗಳಾಗುವ ಸಮಯ ಬಂದೇ ಬಿಟ್ಟಿದೆ. ಏನು ಮಾಡುವುದೆಂದು ಗೊತ್ತಾಗದೇ ಕಾಲಚಕ್ರದಂತೆ ಮುನ್ನುಗ್ಗಲೆಬೇಕಾಗಿದೆ. ಮುನ್ನುಗ್ಗುತ್ತೇವೆ ಕಥೆಗಳಾದ ನೆನಪುಗಳೊಂದಿಗೆ.
– ಅವಿನಾಶ ವಗರನಾಳ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಕುವೆಂಪು ವಿವಿ, ಶಂಕರಘಟ್ಟ.