Advertisement
ಪ್ರಿಯಾಂಕಾ ಮತ್ತು ದಿಗಂತ್ ಸ್ನೇಹಿತರಾಗಿದ್ದರು. ಆಕೆಯ ತಂದೆ ಚಿನ್ನದ ವ್ಯಾಪಾರಿ. ಇದನ್ನು ತಿಳಿದುಕೊಂಡೇ ದಿಗಂತ್ ಆಕೆಯ ಸ್ನೇಹ ಮಾಡಿದ್ದ. ಕ್ಯಾಸಿನೋದಲ್ಲಿ ಹಣ ಹೂಡಿ ದುಪ್ಪಟ್ಟು ಸಂಪಾದಿಸಿ ಕೊಡುವುದಾಗಿ ಆಮಿಷವೊಡ್ಡಿದ್ದ. ಇದನ್ನು ನಂಬಿದ ಪ್ರಿಯಾಂಕಾ ಮನೆಯಲ್ಲಿ ಯಾರಿಗೂ ತಿಳಿಯದಂತೆ ತನ್ನ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ನೀಡಿದ್ದಳು. ಆದರೆ ನಿಗದಿತ ಸಮಯದಲ್ಲಿ ಆತ ವಾಪಸ್ ಕೊಡದೆ ಇಲ್ಲದ ಸಬೂಬು ಹೇಳುತ್ತಿದ್ದ. ಅದರಿಂದ ನೊಂದಿದ್ದ ಪ್ರಿಯಾಂಕಾ ನ. 28ರಂದು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಆಕೆಯ ಮೊಬೈಲ್ ಪರಿಶೀಲಿಸಿದಾಗ ಬ್ಯಾಕ್ ಕವರ್‌ನಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ದಿಗಂತ್ ಎಂಬ ಯುವಕ ಹೆಸರು ಉಲ್ಲೇಖವಾಗಿತ್ತು ಎಂದು ಪೊಲೀಸರು ಹೇಳಿದರು. Advertisement
Bangaluru;15 ಲ.ರೂ. ಚಿನ್ನ ಪಡೆದು ವಂಚಿಸಿದ ಸ್ನೇಹಿತ: ವಿದ್ಯಾರ್ಥಿನಿ ಆತ್ಮಹ*ತ್ಯೆ
12:39 AM Dec 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.