Advertisement

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

07:57 PM Dec 25, 2024 | Team Udayavani |

ಜೈಪುರ: ಪತಿ ಕೆಲಸದಿಂದ ನಿವೃತ್ತಿಯಾದ ದಿನವೇ ಪತ್ನಿ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ.

Advertisement

ಏನಿದು ಘಟನೆ?: ಕೇಂದ್ರೀಯ ಉಗ್ರಾಣ ನಿಗಮದಲ್ಲಿ ವ್ಯವಸ್ಥಾಪಕರಾಗಿದ್ದ ದೇವೇಂದ್ರ ಸಂದಲ್ ಎನ್ನುವವರು ತನ್ನ ಪತ್ನಿ ಟೀನಾ ಅವರ ಆರೋಗ್ಯದ ದೃಷ್ಟಿಯಿಂದ ಮೂರು ವರ್ಷ ಮೊದಲೇ ಸ್ವಯಂ ನಿವೃತಿಯಾಗಲು ನಿರ್ಧರಿಸಿದ್ದರು. ಟೀನಾ ಅವರು ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ದೇವಂದ್ರ ಅವರು ಕರ್ತವ್ಯದಿಂದ ಮೂರು ವರ್ಷ ಮೊದಲೇ ಪತ್ನಿಯ ಆರೈಕೆಗಾಗಿ ನಿವೃತಿ ಆಗಲು ನಿರ್ಧರಿಸಿದ್ದರು.

ಹೀಗಾಗಿ ದೇವಂದ್ರ ಅವರ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನಾರೋಗ್ಯವಿದ್ದರೂ ದೇವಂದ್ರ ಅವರ ಪತ್ನಿ ಭಾಗಿಯಾಗಿದ್ದರು.

ಇಬ್ಬರಿಗೂ ಹೂವಿನ ಮಾಲೆಯನ್ನು ಹಾಕಿ ಉದ್ಯೋಗಿಗಳು ಫೋಟೋವನ್ನು ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಟೀನಾ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

ನನಗೆ ತಲೆ ಸುತ್ತುತ್ತಿದೆ ಎಂದು ಟೀನಾ ಪತಿಯ ಬಳಿ ಹೇಳಿದ್ದಾರೆ. ಇದನ್ನು ಕೇಳಿದ ದೇವೇಂದ್ರ  ಪತ್ನಿಯ ಬೆನ್ನು ಸವರಿದ್ದಾರೆ. ಯಾರಾದ್ರೂ ನೀರು ತನ್ನಿ ಎಂದು ಕೇಳಿದ್ದಾರೆ. ಹೀಗಿರುವಾಗಲೇ ಟೀನಾ ಅವರು ಮೇಜಿನ ಮೇಲೆಯೇ ಕುಸಿದು ಬಿದ್ದಿದ್ದಾರೆ.

Advertisement

ಇದಾದ ಬಳಿಕ ತಕ್ಷಣ ಟೀನಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಕೋಟದ ಶಾಸ್ತ್ರಿನಗರದ ದಾದಾಬರಿ ಪ್ರದೇಶದಲ್ಲಿ ಪತಿಯೊಂದಿಗೆ ವಾಸವಿದ್ದ ಟೀನಾ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಪತಿ ದೇವೇಂದ್ರ ಪತ್ನಿಯ ಆರೈಕೆಗಾಗಿ ಕೆಲಸದಿಂದ ಮೂರು ವರ್ಷ ಮುನ್ನವೇ ನಿವೃತ್ತಿಯಾಗಲು ನಿರ್ಧರಿಸಿದ್ದರು. ಆದರೆ ಪತ್ನಿ ನಿವೃತ್ತಿ ದಿನವೇ ಮೃತಪಟ್ಟಿದ್ದಾರೆ.

ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next