Advertisement
ರಾಜಾಜಿನಗರ ನಿವಾಸಿ ದಿಗಂತ್ ಬಂಧಿತ ಆರೋಪಿ. ನಗರದ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕಾ (19) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ತನ್ನ ಸ್ನೇಹಿತ ದಿಗಂತ್ ಹೆಸರು ಉಲ್ಲೇಖೀಸಿದ್ದಳು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
Related Articles
Advertisement
ಕಾಲೇಜಿನಲ್ಲಿ ಸ್ನೇಹಿತನಾಗಿದ್ದ ದಿಗಂತ್‌ಗೆ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನೀಡಿದ್ದೆ. ಆತ ಚಿನ್ನ ವಾಪಸ್ ಕೊಡದೆ ಪೀಡಿಸುತ್ತಿದ್ದ. ಮಾನಸಿಕ ಕಿರುಕುಳ ನೀಡುತ್ತಿದ್ದ. ನನ್ನ ಸಾವಿಗೆ ದಿಗಂತ್ ಕಾರಣ’ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾರೆ ಎಂದು ಮೃತ ವಿದ್ಯಾರ್ಥಿನಿಯ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖೀಸಿದ್ದರು.
ತಂದೆ ಚಿನ್ನದ ವ್ಯಾಪಾರಿ ಆಗಿದ್ದಕ್ಕೆ ಪುತ್ರಿ ಜತೆಗೆ ಸ್ನೇಹ ಮಾಡಿದ ದಿಗಂತ್:
ಮೃತ ಯುವತಿಯ ತಂದೆ ಚಿನ್ನದ ವ್ಯಾಪಾರಿ ಆಗಿದ್ದಾರೆ. ಇದನ್ನು ತಿಳಿದುಕೊಂಡೇ ದಿಗಂತ್ ಆಕೆಯ ಸ್ನೇಹ ಮಾಡಿದ್ದ. ಕ್ಯಾಸಿನೋದಲ್ಲಿ ಹಣ ಹೂಡಿ, ದುಪ್ಪಟ್ಟು ಸಂಪಾದಿಸಿ ಕೊಡುವುದಾಗಿ ಆತ ಆಮಿಷವೊಡ್ಡಿದ್ದ. ಇದನ್ನು ನಂಬಿ ಮನೆಯಲ್ಲಿ ಯಾರಿಗೂ ತಿಳಿಯದಂತೆ ಚಿನ್ನಾಭರಣಗಳನ್ನು ದಿಗಂತನಿಗೆ ನೀಡಿದ್ದಳು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.