Advertisement
ಎಡಗೈ ವೇಗಿ ಮೊಹಮ್ಮದ್ ಅಮೀರ್ ಅವರು ಶನಿವಾರ (ಡಿ.14) ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ವಿಶೇಷವೆಂದರೆ, ಅಮೀರ್ ಮಾರ್ಚ್ 2024 ರಲ್ಲಿ ನಿವೃತ್ತಿ ಹಿಂಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿದ್ದರು. ಮೂರು ವರ್ಷ ಮತ್ತು ಎಂಟು ತಿಂಗಳ ಬಳಿಕ ನಂತರ ಅಮೀರ್ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.
Related Articles
Advertisement
2009 ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಅಮೀರ್ 271 ಅಂತರಾಷ್ಟ್ರೀಯ ವಿಕೆಟ್ಗಳೊಂದಿಗೆ ನಿವೃತ್ತಿ ಹೊಂದಿದರು. ಅವರು ಟೆಸ್ಟ್ನಲ್ಲಿ 36 ಪಂದ್ಯಗಳಿಂದ 119 ವಿಕೆಟ್ಗಳು, 61 ಏಕದಿನ ಪಂದ್ಯಗಳಿಂದ 81 ವಿಕೆಟ್ ಗಳು ಮತ್ತು 62 ಟಿ20 ಪಂದ್ಯಗಳಲ್ಲಿ 71 ವಿಕೆಟ್ಗಳನ್ನು ಪಡೆದರು. ಅವರು ಪಾಕಿಸ್ತಾನದ 2009 ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಆದಾಗ್ಯೂ, 2010 ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ಅವರು ಜೈಲುಪಾಲಾಗಿದ್ದರು.
ಅಮೀರ್ 5 ವರ್ಷಗಳ ನಿಷೇಧವನ್ನು ಎದುರಿಸಿದ್ದರು. ಅವರು ಅಂತಿಮವಾಗಿ 2016 ರಲ್ಲಿ ತಮ್ಮ ನಿಷೇಧವನ್ನು ಪೂರೈಸಿದ ನಂತರ ಅಂತರಾಷ್ಟ್ರೀಯ ಕ್ರಿಕೆಟ್ಗೆ ಮರಳಿದರು. ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ 2017 ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಮುಂದೆ 2019 ರ ಏಕದಿನ ವಿಶ್ವಕಪ್ನಲ್ಲಿ ಪಾಕ್ ಪರ ಪ್ರಮುಖ ವಿಕೆಟ್ ಟೇಕರ್ ಆಗಿ ಮೂಡಿ ಬಂದಿದ್ದರು. ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಆಡಳಿತದೊಂದಿಗೆ ಸಂಘರ್ಷದ ನಂತರ ಅಮೀರ್ ಡಿಸೆಂಬರ್ 2020 ರಲ್ಲಿ ನಿವೃತ್ತಿ ಘೋಷಿಸಿದರು. ಆದರೆ ಮಾರ್ಚ್ 2024 ರಲ್ಲಿ ನಿವೃತ್ತಿ ಹಿಂಪಡೆದು ಮತ್ತೆ ಆಡಿದ್ದರು.