ಆಳಂದ: ಬಡವರು, ರೈತರ ಆರೋಗ್ಯ ರಕ್ಷಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಕೃಷಿ ಖಾತೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ವಾಗ್ಧಾಳಿ ನಡೆಸಿದರು.ಪಟ್ಟಣದ ಗುರುಭವನದಲ್ಲಿ ಶ್ರೀಮತಿ ಪಾರ್ವತಿ ತಾಯಿ ಕೋರಳ್ಳಿ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರ ದೊಡ್ಡ ಮೊತ್ತದ ಚಿಕಿತ್ಸೆಗಳಿಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ ಅವರು, ಲಂಡನ್ ಸರ್ಕಾರಿ ಶಾಲೆಗಳಿಗಿರುವ ಬೆಲೆ ಮತ್ತು ಸಿಂಗಾಪುರದ ಸರ್ಕಾರಿ ಆಸ್ಪತ್ರೆಗಳ ಮಹತ್ವ ಅರಿತುರಾಜ್ಯದ ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶಾಲೆ ಮತ್ತು ಆಸ್ಪತ್ರೆ ತೆರೆದು ಬೆಂಗಳೂರು, ದೆಹಲಿ ಮಟ್ಟದಲ್ಲಿ ದೊರೆಯುವ ಶಿಕ್ಷಣ, ಆರೋಗ್ಯದ ವಿಷಯಕ್ಕೆ ಬಂದರೆ ಚಿಕಿತ್ಸೆ ಮತ್ತು ತಪಾಸಣೆಗಳನ್ನು ಗ್ರಾಮೀಣ ಜನರಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.
ಕೊರಳ್ಳಿ ಫೌಂಡೇಶನ್ ಹಮ್ಮಿಕೊಂಡಿರುವ ಬೃಹತ್ ಆರೋಗ್ಯ ಶಿಬಿರದಿಂದ ನಿಜಕ್ಕೂ ಒಳ್ಳೆಯದ್ದಾಗಿದೆ.ಇದನ್ನು ಪ್ರತಿ ವರ್ಷ ನಡೆಸಿ ಬಡವರಿಗೆ ಮತ್ತು ನಿರ್ಗತಿಕರ ಆರೋಗ್ಯ ತಪಾಸಣೆ ಮಾಡಬೇಕು. ಅರ್ಧಕ್ಕೆ ಕೈಬಿಡದೆ ಅವರ ಆರೋಗ್ಯದ ಬಗ್ಗೆ ಪೂರ್ಣವಾಗಿ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
ಪತ್ರಿಕೆ ಮತ್ತು ಟಿವಿಯಲ್ಲಿ ವರದಿ ಗಮನಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಣ್ಣ ವ್ಯಕ್ತಿಯೊಬ್ಬರಿಗೆ 15 ಲಕ್ಷ ರೂ. ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಇಂಥ ಕೆಲಸವನ್ನು ಸರ್ಕಾರದಲ್ಲಿದ್ದವರಿಗೆ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.371ನೇ ಜೆ ಕಲಂ ಜಾರಿಯಾಗಿದೆ. ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ ಎನ್ನುವ ಸರ್ಕಾರ ಎಷ್ಟು ಕಡೆ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಿಸಿ ಚಿಕಿತ್ಸೆ ಕೊಡಿಸುತ್ತಿದೆ.
ಎಷ್ಟು ಕಾರ್ಖಾನೆ ಸ್ಥಾಪಿಸಿ ಉದ್ಯೋಗ ಒದಗಿಸಿದೆ ಎಂದು ಪ್ರಶ್ನಿಸಿದರು. ಉತ್ತರ ಪ್ರದೇಶದ ಚುನಾವಣೆ ಪ್ರಚಾರದಲ್ಲಿ ಪ್ರಧಾನ ಮಂತ್ರಿಗಳು ಮತ್ತೂಂಡೆ ಕಾಂಗ್ರೆಸ್‌ನ ರಾಹುಲ್ ಗಾಂಧಿಧಿ ಅವರು, ಅಧಿಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎನ್ನುತ್ತಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸಾಲ ಮನ್ನಾಕ್ಕಾಗಿ ಒಬ್ಬರ ಮೇಲೆ ಇನ್ನೊಬ್ಬರು ಜವಾಬ್ದಾರಿ ಹಾಕುತ್ತಿದ್ದಾರೆ.
ಇವರ ರೈತಪರ ಕಾಳಜಿ ನೋಡಿ ಎಂದು ವ್ಯಂಗವಾಡಿದರು. ಫೌಂಡೇಶನ್ ಅಧ್ಯಕ್ಷ ಮತ್ತು ಜೆಡಿಎಸ್ ಮುಖಂಡ ಸೂರ್ಯಕಾಂತ ಕೊರಳ್ಳಿ ಮಾತನಾಡಿ, ಪ್ರತಿಯೊಬ್ಬರ ಆರೋಗ್ಯದ ಮಹತ್ವ ಅರಿತು ಪ್ರತಿ ವರ್ಷ ಶಿಬಿರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೈಯ್ಯದ್ ಜಫರ್ ಹುಸೇನ್, ಜೆಡಿಎಸ್ ಸೇವಾದಳ ಜಿಲ್ಲಾ ಅಧ್ಯಕ್ಷ ಶಿವಲಿಂಗಪ್ಪ ಪಾಟೀಲ, ಹೈ.ಕ.ರೈತ ಸಂಘದ ಅಧ್ಯಕ್ಷ ದಯಾನಂದಪಾಟೀಲ ಮಾತನಾಡಿದರು. ನ್ಯಾಯವಾದಿ ರಾಜೇಂದ್ರ, ಕೃಷ್ಣಾ ರಡ್ಡಿ, ರಾಜಶೇಖರ ಚೌಧರಿ, ಆರೀಫ್ ಅನ್ಸಾರಿ, ಶಶಿಕಲಾ ಪಾಟೀಲ ಪಾಲ್ಗೊಂಡಿದ್ದರು. ವಿವಿಧ ಆಸ್ಪತ್ರೆ ತಜ್ಞ ವೈದ್ಯರು ಹಲವು ಗ್ರಾಮಗಳಿಂದ ಬಂದ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿದರು.