Advertisement

GST; ಬಡವರನ್ನು ಕೊ*ಲ್ಲಲು ಮೋದಿಯ ಅಸ್ತ್ರ: ರಾಗಾ ಹೇಳಿದ್ದೇನು?

02:15 AM Nov 10, 2024 | Team Udayavani |

ರಾಂಚಿ: ರೈತರು, ಬಡವರು, ಕಾರ್ಮಿಕರನ್ನು ಕೊಲ್ಲಲೆಂದೇ ಮೋದಿ ಸರಕಾರ ನೋಟು ಅಮಾನ್ಯಿàಕರಣ, ಜಿಎಸ್‌ಟಿ ಕುರಿತಾದ ನೀತಿಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ದೇಶದಲ್ಲಿ ನಿರುದ್ಯೋಗ ವ್ಯಾಪಿಸಲೂ ಮೋದಿ ಸರಕಾರವೇ ಕಾರಣ ಎಂದಿದ್ದಾರೆ.

Advertisement

ಝಾರ್ಖಂಡ್‌ ಚುನಾವಣೆ ಹಿನ್ನೆಲೆಯಲ್ಲಿ ಜೆಮ್ಶೆಡ್‌ಪುರದಲ್ಲಿ ರ್ಯಾಲಿ ನಡೆಸಿ ಮಾತನಾಡಿದ ಅವರು, “ಮೋದಿ ಸರಕಾರ ಬಂಡವಾಳ ಶಾಹಿಗಳ ಪರ. ಭಾರತದಲ್ಲಿ ತೆರಿಗೆ ನೀತಿಗಳನ್ನು ಬಡವರನ್ನು ಲೂಟಿ ಹೊಡೆಯಲೆಂದೇ ರೂಪಿಸಲಾಗಿದೆ. ಅದಾನಿ ಕೂಡ ನಿಮ್ಮಷ್ಟೇ ಸಮನಾಗಿ ತೆರಿಗೆ ಕಟ್ಟುತ್ತಾರೆ’ ಎಂದು ಆರೋಪಿಸಿದ್ದಾರೆ. 1 ಲಕ್ಷ ಕೋಟಿ ರೂ. ಮೌಲ್ಯದ ಮುಂಬಯಿಯ ಧಾರಾವಿ ನಗರವನ್ನು ಅದಾನಿ ಕೈಗಿಡಲಾಗಿದೆ ಎಂದಿದ್ದಾರೆ. ಜತೆಗೆ ಈಗ ಹೋರಾಟ ನಡೆಯುತ್ತಿರು ವುದು ಬಿಜೆಪಿ, ಆರ್‌ಎಸ್‌ಎಸ್‌ ಸಿದ್ಧಾಂತಗಳು ಹಾಗೂ ದ್ವೇಷ ಮತ್ತು ಪ್ರೀತಿಯಲ್ಲಿ ನಂಬಿಕೆ ಉಳ್ಳವರ ನಡುವೆ ಎಂದಿದ್ದಾರೆ.

ಮೋದಿಗೆ ಬಡವರ ಚಿಂತೆ ಇಲ್ಲ

ಪ್ರಧಾನಿ ಮೋದಿ ಸೀ ಪ್ಲೇನ್‌ನಲ್ಲಿ ಓಡಾಡುತ್ತಿದ್ದರೆ, ದೇಶದ ಜನ ಬೆಲೆ ಏರಿಕೆ ಭಾರದಿಂದ ನರಳುತ್ತಿದ್ದಾರೆ ಎಂದು ರಾಹುಲ್‌ ಹೇಳಿದ್ದಾರೆ. ಜತೆಗೆ ದೇಶದಲ್ಲಿ ಶೇ.90ರಷ್ಟು ಜನಸಂಖ್ಯೆ ಒಬಿಸಿ ಸಮುದಾಯವಿದ್ದರೂ ಸರಕಾರಿ ಸಂಸ್ಥೆಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಜಾಗವಿಲ್ಲದಂತಾಗಿದೆ. ಇದನ್ನು ಸರಿ ಪಡಿಸುವುದೇ ನಮ್ಮ ಧ್ಯೇಯ ಎಂದಿದ್ದಾರೆ.

ರಾಗಾ ಹೇಳಿದ್ದೇನು?
ದೇಶದ ತೆರಿಗೆ ನೀತಿಯು ಬಡವರ ರಕ್ತ ಹೀರುತ್ತಿದೆ
ಅದಾನಿಗೂ, ಜನಸಾಮಾ ನ್ಯರಿಗೂ ಒಂದೇ ತೆರಿಗೆ ಇದೆ
ಮೋದಿ ಬಂಡವಾಳಶಾಹಿಗಳ ಪರ. ಮುಂಬಯಿ ಧಾರಾವಿ ನಗರವನ್ನು ಕೇಂದ್ರ ಸರಕಾರ ಗೌತಮ್‌ ಅದಾನಿ ಕೈಗಿಟ್ಟಿದೆ
ಜನರಿಗೆ ಬೆಲೆ ಏರಿಕೆ ಬರೆ, ಮೋದಿಗೆ ಐಷಾರಾಮಿ ಸೇವೆ
ಶೇ.90ರಷ್ಟಿರುವ ಎಸ್ಸಿ-ಎಸ್ಟಿ, ಒಬಿಸಿಗಳಿಗೆ ಮೋದಿ ಸರಕಾರದಿಂದ ವಂಚನೆ
ಸಂವಿಧಾನವನ್ನು ರಕ್ಷಿಸುವುದೇ ಕಾಂಗ್ರೆಸ್‌ನ ಪ್ರಮುಖ ಧ್ಯೇಯ

Advertisement
Advertisement

Udayavani is now on Telegram. Click here to join our channel and stay updated with the latest news.

Next