Advertisement

60 ಸಾವಿರ ಕೋಟಿಯ ಸಬ್‌ಮರಿನ್‌ಯೋಜನೆಗೆ ಶೀಘ್ರದಲ್ಲೇ ಚಾಲನೆ

02:23 PM Jun 12, 2017 | Karthik A |

ಹೊಸದಿಲ್ಲಿ: ಭಾರತದ ಜಲಸೀಮೆ ಸುತ್ತಲೂ ತನ್ನ ಬಾಹುಬಲ ವಿಸ್ತರಿಸಿಕೊಳ್ಳುತ್ತಿರುವ ಚೀನವನ್ನು ಸರಿಗಟ್ಟಲು ಕೇಂದ್ರ ಸರಕಾರ 60 ಸಾವಿರ ಕೋಟಿ ರೂ. ಮೊತ್ತದ ಹೊಸ ಜಲಾಂತರ್ಗಾಮಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲು ಸಿದ್ಧವಾಗಿದೆ. ದೇಶದ ಮಿಲಿಟರಿ ಶಕ್ತಿಯನ್ನು ಅತ್ಯಾಧುನಿಕಗೊಳಿಸಲು ಮತ್ತು ಅಭಿವೃದ್ಧಿಪಡಿಸಲು, ಖಾಸಗಿ ಕ್ಷೇತ್ರದೊಂದಿಗೆ ಕಳೆದ ತಿಂಗಳು ಕೇಂದ್ರ ಸರಕಾರ ಒಪ್ಪಂದಕ್ಕೆ ಬಂದಿದ್ದು, ಅದರನ್ವಯ ಅತ್ಯಾಧುನಿಕ ಜಲಾಂತರ್ಗಾಮಿಗಳು ತಯಾರಾಗಲಿವೆ. ಕೆಲವೇ ದಿನಗಳಲ್ಲಿ ರಕ್ಷಣಾ ಇಲಾಖೆ ಜಲಾಂತರ್ಗಾಮಿ ನಿರ್ಮಾಣ ಕುರಿತ ಘೋಷಣೆ ಮಾಡುವ ಸಾಧ್ಯತೆ ಇದೆ. ಇದಕ್ಕೆ ಪಿ-75 (1) ಯೋಜನೆ ಎಂದು ಹೆಸರಿಡಲಾಗಿದ್ದು, ಲಾರ್ಸೆನ್‌ ಆ್ಯಂಡ್‌ ಟರ್ಬೋ ಮತ್ತು ರಿಲಯನ್ಸ್‌ ಡಿಫೆನ್ಸ್‌ ಮಾತ್ರ ಈ ಯೋಜನೆ ವಹಿಸಿಕೊಳ್ಳುವ ಅರ್ಹತೆ ಹೊಂದಿದೆ.

Advertisement

6 ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ಖಾಸಗಿ ಸಂಸ್ಥೆಗಳು ನಿರ್ಮಿಸಲಿದ್ದು, ಇವುಗಳು ವಿದೇಶಿ ಕಂಪೆನಿಗಳೊಂದಿಗೆ ಸಹಭಾಗಿತ್ವ ಹೊಂದಿರಲಿವೆ. ಈಗಾಗಲೇ ಪ್ರಾಜೆಕ್ಟ್-75 ಹೆಸರಿನಲ್ಲಿ 6 ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದ್ದು, ಇದನ್ನು ಫ್ರಾನ್ಸ್‌ನ ಡಿಸಿಎನ್‌ಎಸ್‌ ವಿನ್ಯಾಸ ಮಾಡಿದೆ. ಇವುಗಳನ್ನು ಮುಂಬೈನ ಮಝಗಾಂವ್‌ ಡಾಕ್‌ ಲಿ. ಹಡಗುಕಟ್ಟೆಯಲ್ಲಿ ನಿರ್ಮಿಸಲಾಗುತ್ತಿದೆ. ಹೊಸ ಪ್ರಾಜೆಕ್ಟ್-75(1) ನಲ್ಲೂ 6 ಸಬ್‌ಮರೀನ್‌ ನಿರ್ಮಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next