ನವದೆಹಲಿ: ಸಿರಿಯಾದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸಿರುವ ಭಾರತ ಸರಕಾರ ಸಿರಿಯಾದಲ್ಲಿರುವ ಭಾರತೀಯರು ಆದಷ್ಟು ಬೇಗ ದೇಶ ತೊರೆಯುವಂತೆ ಅಲ್ಲದೆ ಮುಂದಿನ ಆದೇಶ ಬರುವವರೆಗೆ ಸಿರಿಯಾಕ್ಕೆ ಪ್ರಯಾಣವನ್ನು ಬೆಳೆಸದಂತೆ ಸಲಹೆ ನೀಡಿದೆ.
ಸಿರಿಯಾದಲ್ಲಿ ಅಂತರ್ಯುದ್ಧಗಳು ನಡೆಯುತ್ತಿದ್ದು ಇದರ ನಡುವೆ ಅಲ್ಲಿರುವ ಅಲೆಪ್ಪೊ ನಗರದ ಬಹುತೇಕ ಭಾಗಗಳನ್ನು ಬಂಡುಕೋರರು ವಶಪಡಿಸಿಕೊಂಡ ಬೆನ್ನಲ್ಲೇ ಭಾರತ ಸಿರಿಯಾಲ್ಲಿರುವ ಭಾರತೀಯ ಪ್ರಜೆಗಳಿಗೆ ಸಂದೇಶವನ್ನು ರವಾನಿಸಿದೆ. ಅಲ್ಲದೆ ಅಲ್ಲಿರುವ ಭಾರತೀಯ ಪ್ರಜೆಗಳು ಆದಷ್ಟು ಬೇಗ ದೇಶ ತೊರೆಯುವಂತೆ ಸಲಹೆ ನೀಡಿದ್ದು ಜೊತೆಗೆ ಮುಂದಿನ ಆದೇಶ ಬರುವವರೆಗೆ ಯಾರೂ ಸಿರಿಯಾಕ್ಕೆ ಪ್ರಯಾಣಿಸದಂತೆ ಸೂಚನೆ ರವಾನಿಸಿದೆ,
ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರ ಪ್ರಕಾರ ಸಿರಿಯಾದಲ್ಲಿ ಸುಮಾರು 90 ಮಂದಿ ಭಾರತೀಯರಿದ್ದಾರೆ, ಇದರಲ್ಲಿ 14 ಮಂದಿ ವಿವಿಧ ಯುಎನ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಅಲ್ಲದೆ ಸಿರಿಯಾದಲ್ಲಿರುವ ಭಾರತೀಯ ನಾಗರೀಕರು ಭಾರತದ ರಾಯಭಾರ ಕಚೇರಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರಲು ಸೂಚಿಸಿದೆ. ಅಗತ್ಯ ವಿಮಾನಗಳ ಮೂಲಕ ಭಾರತಕ್ಕೆ ಮರಳುವಂತೆ ಸೂಚಿಸಿದ್ದು ಯಾರಿಗೆ ತಕ್ಷಣಕ್ಕೆ ಹೊರಟು ಬರಲು ಸಾಧ್ಯವಿಲ್ಲವೋ ಅವರು ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಸಲಹೆಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದು ಜೊತೆಗೆ ಸಿರಿಯಾದ ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹಾಯವಾಣಿಯನ್ನು ಆರಂಭಿಸಿದ್ದು ಈ ಸಂಖ್ಯೆಗೆ ಕರೆ ಮಾಡಿ ಸಲಹೆ ಪಡೆಯುವಂತೆ ಸೂಚನೆ ನೀಡಿದೆ.
ಸಹಾಯವಾಣಿ ಸಂಖ್ಯೆ +963 993385973 ಅಷ್ಟು ಮಾತ್ರವಲ್ಲದೆ
hoc.damascus@mea.gov.in ಇಮೇಲ್ ಮೂಲಕವೂ ಸಂಪರ್ಕಿಸಲು ಕೋರಲಾಗಿದೆ.
ಇದನ್ನೂ ಓದಿ: Kukke Subrahmanya Temple: ಭಕ್ತಿ, ಸಂಭ್ರಮದಿಂದ ನೆರವೇರಿದ ಚಂಪಾಷಷ್ಠಿ ಮಹಾರಥೋತ್ಸವ