Advertisement

Syria;ಬಂಡುಕೋರರ ಪ್ರಾಬಲ್ಯದ ಬೆನ್ನಲ್ಲೇ 75 ಭಾರತೀಯ ಪ್ರಜೆಗಳ ಸ್ಥಳಾಂತರ

09:02 AM Dec 11, 2024 | Team Udayavani |

ಡಮಾಸ್ಕಸ್: ಬಂಡುಕೋರ ಪಡೆಗಳು ನಿರಂಕುಶಾಧಿಕಾರಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರನ್ನು ಪದಚ್ಯುತಗೊಳಿಸಿದ ಬೆನ್ನಲ್ಲೇ ಭಾರತವು ಮಂಗಳವಾರ(ಡಿ11) 75 ಭಾರತೀಯರನ್ನು ಸಿರಿಯಾದಿಂದ ಸ್ಥಳಾಂತರಿಸಲಾಗಿದೆ.

Advertisement

ಎಲ್ಲಾ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಲೆಬನಾನ್‌ಗೆ ತೆರಳಿದ್ದು ಮತ್ತು ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಭಾರತಕ್ಕೆ ಹಿಂತಿರುಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.

ಭದ್ರತಾ ಪರಿಸ್ಥಿತಿಯ ಮೌಲ್ಯಮಾಪನದ ನಂತರ ಡಮಾಸ್ಕಸ್ ಮತ್ತು ಬೈರುತ್‌ನಲ್ಲಿರುವ ಭಾರತದ ರಾಯಭಾರ ಕಚೇರಿಗಳು ಸಮನ್ವಯಗೊಳಿಸಿದ ಸ್ಥಳಾಂತರಿಸುವಿಕೆಯನ್ನು ಜಾರಿಗೆ ತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭಾರತ ಸರಕಾರವು ಇಂದು 75 ಭಾರತೀಯ ಪ್ರಜೆಗಳನ್ನು ಸಿರಿಯಾದಿಂದ ಸ್ಥಳಾಂತರಿಸಿದೆ. ಸ್ಥಳಾಂತರಿಸಿದವರಲ್ಲಿ ಸೈದಾ ಜೈನಾಬ್‌ನಲ್ಲಿ ಸಿಲುಕಿರುವ ಜಮ್ಮು ಮತ್ತು ಕಾಶ್ಮೀರದ 44 ‘ಜೈರೀನ್’ಗಳು ಸೇರಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next