Advertisement

ಅಂಡರ್‌-19 ತಂಡಗಳ ದ್ವಿತೀಯ ಟೆಸ್ಟ್‌ ಪಂದ್ಯ: ಇಂಗ್ಲೆಂಡಿಗೆ ರಾಲಿನ್ಸ್‌

12:43 PM Feb 22, 2017 | |

ನಾಗ್ಪುರ: ಒಂದು ರನ್‌ ಆಗುವಷ್ಟರಲ್ಲಿ ಸಾಲು ಸಾಲಾಗಿ 3 ವಿಕೆಟ್‌ ಉರುಳಿಸಿಕೊಂಡು ಆಕಾಶದತ್ತ ಮುಖ ಮಾಡಿ ನಿಂತಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಡೆಲಾÅಯ್‌ ಲಾರೆನ್ಸ್‌ ಅಜೇಯ 124 ರನ್‌ ಮೂಲಕ ಆಸರೆಯಾಗಿದ್ದಾರೆ. ಇದರೊಂದಿಗೆ ಮಂಗಳ ವಾರ ಮೊದಲ್ಗೊಂಡ 2ನೇ ಅಂಡರ್‌-19 ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡ ಭಾರತದ ವಿರುದ್ಧ 5 ವಿಕೆಟಿಗೆ 243 ರನ್‌ ಗಳಿಸಿ ಮರ್ಯಾದೆ ಉಳಿಸಿಕೊಂಡಿದೆ.

Advertisement

ರಾಲಿನ್ಸ್‌ 254 ಎಸೆತ ಎದುರಿಸಿದ್ದು, 16 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿ 124 ರನ್‌ ಮಾಡಿ ಕ್ರೀಸಿಗೆ ಅಂಟಿಕೊಂಡಿದ್ದಾರೆ. ಅವರಿಗೆ 66 ರನ್‌ ಮಾಡಿರುವ ವಿಲ್‌ ಜಾಕ್ಸ್‌ ಉತ್ತಮ ಬೆಂಬಲವಿತ್ತಿದ್ದಾರೆ. ಇವರಿಂದ ಮುರಿಯದ 6ನೇ ವಿಕೆಟಿಗೆ 131 ರನ್‌ ಸಂಗ್ರಹಗೊಂಡಿದೆ.

ಒಂದು ರನ್ನಿಗೆ 3 ವಿಕೆಟ್‌ ಉರುಳಿದ ಬಳಿಕ ಜತೆಗೂಡಿದ ರಾಲಿನ್ಸ್‌-ಓಲೀ ಪೋಪ್‌ 4ನೇ ವಿಕೆಟಿಗೆ 98 ರನ್‌ ಪೇರಿಸಿದರು. ಪೋಪ್‌ ಗಳಿಕೆ 42 ರನ್‌. ಭಾರತದ ಪರ ರಿಷಬ್‌ ಭಗತ್‌ 2 ವಿಕೆಟ್‌ ಕಿತ್ತರು.

ಇಲ್ಲೇ ನಡೆದಿದ್ದ ಸರಣಿಯ ಮೊದಲ ಟೆಸ್ಟ್‌ ಪಂದ್ಯ ರೋಮಾಂಚಕಾರಿಯಾಗಿ ಡ್ರಾದಲ್ಲಿ ಅಂತ್ಯಗೊಂಡಿತ್ತು. ಭಾರತ ಕೊನೆಯ 2 ವಿಕೆಟ್‌ ಉಳಿಸಿಕೊಂಡು ಸೋಲಿನಿಂದ ಬಚಾವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next