Advertisement
ಮಳೆಯಿಂದಾಗಿ ಓವರ್ಗಳ ಸಂಖ್ಯೆಯನ್ನು 37ಕ್ಕೆ ಇಳಿಸಲಾಗಿತ್ತು. ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ 9 ವಿಕೆಟಿಗೆ 255 ರನ್ ಪೇರಿಸಿದರೆ, ಶ್ರೀಲಂಕಾ 30.2 ಓವರ್ಗಳಲ್ಲಿ 142ಕ್ಕೆ ಕುಸಿಯಿತು. ಮೊದಲ ಪಂದ್ಯವನ್ನು ನ್ಯೂಜಿಲ್ಯಾಂಡ್ 9 ವಿಕೆಟ್ಗಳಿಂದ ಜಯಿಸಿತ್ತು. ಅಂತಿಮ ಪಂದ್ಯ ಶನಿವಾರ ಆಕ್ಲೆಂಡ್ನಲ್ಲಿ ನಡೆಯಲಿದೆ.
ಶ್ರೀಲಂಕಾದ ಸ್ಪಿನ್ನರ್ ಮಹೀಶ ತೀಕ್ಷಣ ಹ್ಯಾಟ್ರಿಕ್ ಸಾಧನೆಯೊಂದಿಗೆ ಗುರುತಿಸಿಕೊಂಡರು (44ಕ್ಕೆ 4). ಅವರು 35ನೇ ಓವರಿನ ಕೊನೆಯ 2 ಎಸೆತಗಳಲ್ಲಿ ಸ್ಯಾಂಟ್ನರ್ ಮತ್ತು ಸ್ಮಿತ್ ವಿಕೆಟ್ ಉರುಳಿಸಿದರು. ಅನಂತರ 37ನೇ ಓವರ್ನ ಮೊದಲ ಎಸೆತದಲ್ಲಿ ಮ್ಯಾಟ್ ಹೆನ್ರಿ ಅವರನ್ನು ಔಟ್ ಮಾಡಿ ಹ್ಯಾಟ್ರಿಕ್ ಪರಿಪೂರ್ಣಗೊಳಿಸಿದರು. ಆತಿಥೇಯರಿಗೆ ಕಡಿವಾಣ ಹಾಕಿದ ಮತ್ತೋರ್ವ ಬೌಲರ್ ವನಿಂದು ಹಸರಂಗ (39ಕ್ಕೆ 2).
Related Articles
Advertisement
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-9 ವಿಕೆಟಿಗೆ 255 (ರಚಿನ್ 79, ಚಾಪ್ಮನ್ 62, ಮಿಚೆಲ್ 38, ತೀಕ್ಷಣ 44ಕ್ಕೆ 4, ಹಸರಂಗ 39ಕ್ಕೆ 2). ಶ್ರೀಲಂಕಾ-30.2 ಓವರ್ಗಳಲ್ಲಿ 142 (ಕಮಿಂಡು ಮೆಂಡಿಸ್ 64, ಲಿಯನಗೆ 22, ಓ’ರೂರ್ಕ್ 31ಕ್ಕೆ 3, ಡಫಿ 30ಕ್ಕೆ 2).ಪಂದ್ಯಶ್ರೇಷ್ಠ: ರಚಿನ್ ರವೀಂದ್ರ.