Advertisement
ಉತ್ತರ ಕಾಶ್ಮೀರ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾರಾಮುಲ್ಲಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಯೀಸ್ ಭಟ್, ಶುಕ್ರವಾರ ಮುಂಜಾನೆ ಪಟ್ಟಾನ್‌ನ ಯಡಿಪೋರಾ ಪ್ರದೇಶದಲ್ಲಿ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಬಂದ ನಂತರ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಶೋಧನೆಯ ಸಮಯದಲ್ಲಿ, ಭಯೋತ್ಪಾದಕರು ಗುಂಡು ಹಾರಿಸಿದರು ಮತ್ತು ದೀರ್ಘಕಾಲದವರೆಗೆ ಎನ್ ಕೌಂಟರ್ ನಡೆಯಿತು ಮತ್ತು ಬೆಳಗ್ಗೆ ಇಬ್ಬರು ಉಗ್ರರು ಕೊಲ್ಲಲ್ಪಟ್ಟರು” ಎಂದು ಎಸ್‌ಎಸ್‌ಪಿ ಹೇಳಿದರು.
Related Articles
Advertisement
ಭದ್ರತಾ ಪಡೆಗಳು ಎನ್‌ಕೌಂಟರ್ ಸ್ಥಳದಿಂದ ವಿದೇಶಿ ಉಗ್ರರು ಬಳಸುವ ಎಕೆಎಸ್ -74 ಯು ರೈಫಲ್ ಮತ್ತು ಮೂರು ಮ್ಯಾಗಜೀನ್‌ಗಳು, ಪಿಸ್ತೂಲ್ ಸೇರಿ ಶಸ್ತ್ರಾಸ್ತ್ರ ಗಳನ್ನು ವಶಪಡಿಸಿಕೊಂಡಿವೆ ಎಂದು ಅವರು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಮೊದಲು ಭಯೋತ್ಪಾದಕರು ತಮ್ಮ ಅಸ್ತಿತ್ವವನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ಭದ್ರತಾ ಪಡೆಗಳು ಈಗಾಗಲೇ ನೀಡಿದ ಎಚ್ಚರಿಕೆ ಮತ್ತು ಭೇಟಿಗೆ ಮುಂಚಿತವಾಗಿ ಹೆಚ್ಚಿನ ಭದ್ರತೆಯಿಂದಾಗಿ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಎಸ್‌ಎಸ್‌ಪಿ ಹೇಳಿದರು.
ರಜೌರಿ ಮತ್ತು ಬಾರಾಮುಲ್ಲಾದಲ್ಲಿ ಎರಡು ಮೆಗಾ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಶಾ ಸೆ. 30 ಕ್ಕೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬೇಕಿತ್ತು. ಆದರೆ ಅವರ ಭೇಟಿಯನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ.