Advertisement

Harmeet K. Dhillon: ಟ್ರಂಪ್‌ ಸರ್ಕಾರದ ಉನ್ನತ ಹುದ್ದೆಗೆ ಭಾರತ ಮೂಲದ ಹರ್ಮೀತ್‌ ಧಿಲ್ಲೋನ್‌

11:22 PM Dec 11, 2024 | Team Udayavani |

ವಾಷಿಂಗ್ಟನ್‌: ಟ್ರಂಪ್‌ ಸರ್ಕಾರದಲ್ಲಿ ನ್ಯಾಯಾಂಗ ಇಲಾಖೆ ನಾಗರಿಕ ಹಕ್ಕುಗಳ ಸಹಾ ಯಕ ಅಟಾ­ರ್ನಿ­ಯಾಗಿ ಭಾರತ ಮೂಲದ ಹರ್ಮೀತ್‌ ಧಿಲ್ಲೋನ್‌ ಅವರನ್ನು ನೇಮಕ ಮಾಡಲಾ­ಗಿದೆ.

Advertisement

ಈ ಬಗ್ಗೆ ಡೊನಾಲ್ಡ್‌ ಟ್ರಂಪ್‌ “ಟ್ರೂ ಸೋಷಿಯಲ್‌’ನಲ್ಲಿ ಪೋಸ್ಟ್‌ ಮಾಡಿದ್ದು, “ಧಿಲ್ಲೋನ್‌ ಸಿಖ್ಖರ ಒಬ್ಬ ಗೌರವಯುತ ನಾಯಕಿ. ನಮ್ಮ ಸಾಂವಿಧಾನಿಕ ಹಕ್ಕುಗಳ ರಕ್ಷಕಿ’ ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿನ ರೈತ ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕಾಗಿ ಹಾಗೂ ಉತ್ತರ ಅಮೆರಿಕದಲ್ಲಿ ಸಿಖ್‌ ಸಮುದಾಯವನ್ನು ಗುರಿಯಾಗಿಸಿದನ್ನು “ಇಂಡಿಯನ್‌ ಡೆತ್‌ ಸ್ಕ್ವಾಡ್‌’ ಎಂದು ಆರೋಪಿಸಿದ್ದ ಕಾರಣಕ್ಕೂ ಧಿಲ್ಲೋನ್‌ ಸುದ್ದಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next