Advertisement

ವಾರಾಹಿ ಜಲಾನಯನ ಪ್ರದೇಶದಲ್ಲಿ ಮತ್ತೆ ಭೂಕಂಪ

12:32 AM Feb 27, 2019 | |

ಹೊಸನಗರ/ ತೀರ್ಥಹಳ್ಳಿ: ತಾಲೂಕಿನ ವಾರಾಹಿ ಹಿನ್ನೀರು ಪ್ರದೇಶ ಹಾಗೂ ಹೊಸನಗರ ತಾಲೂಕಿನ ಮಾಣಿ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಮಂಗಳವಾರ ಮುಂಜಾನೆ 2.25ಕ್ಕೆ ಲಘು ಭೂಕಂಪ ಸಂಭವಿಸಿದೆ.

Advertisement

ಫೆಬ್ರವರಿಯಲ್ಲಿ ಮೂರನೇ ಬಾರಿಗೆ ಈ ಭಾಗದಲ್ಲಿ ಭೂಮಿ ಕಂಪಿಸಿದೆ. ಆದರೆ ರಿಕ್ಟರ್‌ ಮಾಪಕದಲ್ಲಿ ಈ ಬಗ್ಗೆ ಮಾಹಿತಿ ದಾಖಲಾಗಿಲ್ಲ. ಆಗುಂಬೆ ಹೋಬಳಿ ವ್ಯಾಪ್ತಿಯ ಮೇಗರವಳ್ಳಿ ಸಮೀಪದ ಹನಸ, ಮಲ್ಲಕ್ಕಿ, ಹುರುಳಿ, ಗಾರ್ಡರಗದ್ದೆ ಪ್ರದೇಶದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಆ ಭಾಗದ ಗ್ರಾಮಸ್ಥರು ತಿಳಿಸಿದ್ದಾರೆ.

ಮಾಣಿ ಜಲಾನಯನ ಪ್ರದೇಶದ ಯಡೂರು, ಸುಳಗೋಡು, ಖೈರುಗುಂದಾ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 2 ಸೆಕೆಂಡ್‌ಗಳ ಕಾಲ ಲಘು ಭೂಕಂಪ ಆಗಿದೆ ಎಂದು ಓಣಿಮನೆ ಅಶೋಕ ಎಂಬುವವರು ತಿಳಿಸಿದ್ದಾರೆ. ವಾರಾಹಿ ಹಿನ್ನೀರು ಪ್ರದೇಶಗಳಾದ ಈ ಗ್ರಾಮಗಳಲ್ಲಿ ಫೆ.3ರಂದು ಮುಂಜಾನೆ ಭೂಕಂಪನವಾಗಿತ್ತು. ನಂತರ ಫೆ.4ರಂದು ಮತ್ತೂಮ್ಮೆ ಭೂಮಿ ಕಂಪಿಸಿತ್ತು. ಈಗ ಮತ್ತೂಮ್ಮೆ ಭೂಮಿ ಕಂಪಿಸಿದೆ.

ಮಂಗಳವಾರ ಮುಂಜಾನೆ ಈ ಭಾಗದಲ್ಲಿ ಸಂಭವಿಸಿದ ಭೂ ಕಂಪನದ ಬಗ್ಗೆ ತಾಲೂಕಿನ ವಿಠuಲ ನಗರದ ರಿಕ್ಟರ್‌ ಮಾಪಕ ಕೇಂದ್ರದಲ್ಲಿ ಯಾವುದೇ ಮಾಹಿತಿ ದಾಖಲಾಗಿಲ್ಲ ಎಂದು ತಾಲೂಕು ಆಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next