Advertisement

ಹದಗೆಟ್ಟ ರಸ್ತೆಗಳು, ಚರಂಡಿಯೇ ಇಲ್ಲಿ ದೊಡ್ಡ ಸಮಸ್ಯೆ

06:00 AM Jun 15, 2018 | Team Udayavani |

ಕುಂದಾಪುರ: ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜಿನ ಪಕ್ಕದಲ್ಲಿ ಹಾದು ಹೋದ ರಸ್ತೆಯಲ್ಲಿ ಸಾಗಿದರೆ ವಿಠಲವಾಡಿ, ನಾವಡರಕೇರಿ ಸಿಗುತ್ತದೆ. ಪ್ರಮುಖವಾಗಿ ಇಲ್ಲಿನ ಜನ ಚರಂಡಿ ಹಾಗೂ ರಸ್ತೆಯ ಸಮಸ್ಯೆ ಕುರಿತು ಪ್ರಸ್ತಾಪಿಸುತ್ತಾರೆ.
ಈ ವಾರ್ಡ್‌ನಲ್ಲಿ ಐದು ಕೆರೆಗಳಿವೆ. ಚಟ್‌ಕೆರೆ, ಹೌಂಟಿಕೆರೆ, ಶೆಡ್ತಿಕೆರೆ, ಹುಣ್ಸೆಕೆರೆ, ದೇವರ ಕೆರೆ ಎಂದು. ಈ ಪೈಕಿ ದೇವರ ಕೆರೆಯನ್ನು 4 ವರ್ಷ ಮೊದಲು ದುರಸ್ತಿ ಮಾಡಲಾಗಿದ್ದರೂ ಕಾಮಗಾರಿ ಕುರಿತು ಸ್ಥಳೀಯರಿಗೆ ಅಸಮಾಧಾನ ಇದೆ. 

Advertisement

ತಾಜಾ ಉದಾಹರಣೆ 
ಉಳಿದ ಕೆರೆಗಳನ್ನು ದುರಸ್ತಿ ಮಾಡಿದ್ದರೆ ಸಮೃದ್ಧ ನೀರು ದೊರೆಯುತ್ತಿತ್ತು. ಈ ಬಗ್ಗೆ ಆಡಳಿತ ಮನಸ್ಸು ಮಾಡಬೇಕಿದೆ ಎನ್ನುವುದು ಸ್ಥಳೀಯರ ಅಭಿಮತ. ಒಳಚರಂಡಿ ಕಾಮಗಾರಿ ಮಾಡಿದ ರೀತಿಯಿಂದಾಗಿ ಕೆಲವೆಡೆ ನೀರು ಚರಂಡಿಯಲ್ಲಿ ಹರಿಯದೇ ರಸ್ತೆಯಲ್ಲಿ ಹರಿಯುತ್ತದೆ. ಮಳೆಗಾಲಕ್ಕೆ ಮೊದಲೇ ಅವಸರ ಅವಸರದಿಂದ ಕಾಮಗಾರಿ ಮಾಡಿದ ಕಾರಣ ಹೀಗಾಗಿದೆ ಎಂಬ ಸಬೂಬು ಕೂಡಾ ದೊರೆಯುತ್ತದೆ. ಪರಮೇಶ್ವರಿ ದೇವಸ್ಥಾನದ ಬಳಿ ಇದಕ್ಕೊಂದು ತಾಜಾ ಉದಾಹರಣೆ ಇದೆ.
 
ಚರಂಡಿ ತುಂಬಿದಾಗ ನೀರು ರಸ್ತೆಯ ಮೇಲಿರುತ್ತದೆ. ಇನ್ನು ಕೆಲವೆಡೆ ಚರಂಡಿ ಮಾಡಲಾಗಿದೆ. ಆದರೆ ಅದನ್ನು ಮುಚ್ಚಿಲ್ಲ. ಹಾಗಾಗಿ ಸಣ್ಣ ಪುಟ್ಟ ಮಕ್ಕಳಿರುವವರು ಸ್ವಲ್ಪ ಆತಂಕಕ್ಕೆ ಒಳಗಾಗುತ್ತಾರೆ. ವಾರ್ಡ್‌ಗೆ ಪ್ರವೇಶವಾಗುವಾಗ ಚರಂಡಿ ಮಾಡಲು ರಸ್ತೆ ಬದಿ ಜಾಗವೇ ಇಲ್ಲ. ಹಾಗಾಗಿ ಅಲ್ಲೆಲ್ಲ ಚರಂಡಿ ರಹಿತ ರಸ್ತೆಗಳೇ ಸಿಗುತ್ತವೆ. 

ಕರೆಂಟಿಲ್ಲ
ಬಹುತೇಕ ಕಡೆ ರಸ್ತೆ ಬದಿ ಚರಂಡಿ ಸಮರ್ಪಕವಾಗಿಲ್ಲ. ಕೆಲವೆಡೆ ದಾರಿದೀಪವಿಲ್ಲ.ಅನೇಕ ಬಾರಿ ದೀಪವಿದ್ದರೂ ವಿದ್ಯುತ್‌ ಇರುವುದಿಲ್ಲ. ಎರಡು ವಾರಗಳ ಹಿಂದೆ ಮೆಸ್ಕಾಂ ಎದುರು ಪ್ರತಿಭಟನೆ ಮಾಡಿದ್ದೇವೆ ಎನ್ನುತ್ತಾರೆ ಸ್ಥಳೀಯರು. 

ಮಳೆಗಾಲದ ಬಳಿಕ ಕಾಮಗಾರಿ
ಒಳಚರಂಡಿ ಕಾಮಗಾರಿ ಮಳೆಗಾಲಕ್ಕೆ ಮುನ್ನ ಮಾಡಿದ ಕಾರಣ ಒಂದಷ್ಟು ಸಮಸ್ಯೆಯಾಗಿದೆ. ಮಳೆಗಾಲ ಮುಗಿದ ಬಳಿಕ ಸರಿಪಡಿಸಲಾಗುವುದು. ರಸ್ತೆ ಕುರಿತು ಹೊಸದಾಗಿ ಲೇಔಟ್‌ ಮಾಡಿಕೊಂಡವರು ಪುರಸಭೆಗೆ ಮನವಿ ಕೊಟ್ಟಿದ್ದಾರೆ. ಚರ್ಚಿಸಿ ಕ್ರಮೇಣ ಈ ಕುರಿತು ಗಮನಹರಿಸಲಾಗುವುದು. 
ಕಲಾವತಿ, 
ಪುರಸಭಾ ಸದಸ್ಯೆ

ನೀರು ಬರುವ ಸಮಸ್ಯೆ ಇಲ್ಲ 
ಕಳೆದ ವರ್ಷ ಚರಂಡಿ ಆಗಿದೆ. ಆನಂತರ ಮನೆಯಂಗಳಕ್ಕೆ ನೀರು ಬರುವ ಸಮಸ್ಯೆ ಇಲ್ಲ.
– ಜಯಾ,ಸ್ಥಳೀಯರು

Advertisement

ಚರಂಡಿ ಇಲ್ಲ
ದಾರಿದೀಪ ಇಲ್ಲ. ನೀರು ಹರಿಯಲು ಸಮರ್ಪಕ ಚರಂಡಿ ಇಲ್ಲ.ಉಳಿದಂತೆ ಸಮಸ್ಯೆ ಇಲ್ಲ.
– ಹುಸೇನ್‌ ಹೈಕಾಡಿ, 
ಸಾಮಾಜಿಕ ಕಾರ್ಯಕರ್ತರು  

ಕಾಮಗಾರಿ ಅಸಮರ್ಪಕ
ಪರಮೇಶ್ವರಿ ದೇವಸ್ಥಾನ ಎದುರು ನೀರು ಉಕ್ಕಿ ಹರಿಯುತ್ತಿರುತ್ತದೆ. ಒಳಚರಂಡಿ ಕಾಮಗಾರಿಯ ಅಸಮರ್ಪಕತೆಯೇ ಇದಕ್ಕೆ ಕಾರಣ. ವಿದ್ಯುತ್‌ ಸರಬರಾಜಿನ ಸಮಸ್ಯೆಯೂ ಇದೆ. 
– ಸಂದೇಶ್‌, ಸ್ಥಳೀಯರು  

ದುರಸ್ತಿ ಮಾಡಿ
ಗಣಪತಿ ದೇವಸ್ಥಾನ ಬಳಿ ಶಾಲಾ ಮಕ್ಕಳು ಹೋಗುವ ಕಾಲುದಾರಿಯನ್ನು ದುರಸ್ತಿ ಮಾಡಿ ಮಕ್ಕಳು ನಡೆದಾಡುವಂತೆ ಮಾಡಬೇಕು. ರಸ್ತೆಗಳಿಗೆ ಕಾಂಕ್ರಿಟ್‌ ಹಾಕಬೇಕು. .  
– ರಾಘು ವಿಠಲವಾಡಿ, 
ಛಾಯಾಗ್ರಾಹಕರು 

Advertisement

Udayavani is now on Telegram. Click here to join our channel and stay updated with the latest news.

Next