Advertisement

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

09:48 PM Nov 27, 2024 | Team Udayavani |

ಉಡುಪಿ: ಉಡುಪಿಯ ಮೊದಲ ಕಾಲೇಜಾದ ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜಿನ (ಎಂಜಿಎಂ) “ಅಮೃತ ಮಹೋತ್ಸವ’ ಸಮಾರಂಭವು ಕಾಲೇಜಿನ ಮುದ್ದಣ ಮಂಟಪದಲ್ಲಿ ನ. 29ರಿಂದ ಡಿ. 1ರ ತನಕ ನಡೆಯಲಿದೆ.

Advertisement

ನ. 29ರ ಬೆಳಗ್ಗೆ 9ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ “ಟಿ. ಮೋಹನದಾಸ ಪೈ ಮೆಮೋರಿಯಲ್‌ ಅಮೃತ ಸೌಧ’ವನ್ನು ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಅವರು ಉದ್ಘಾಟಿಸುವರು. ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉಪಸ್ಥಿತರಿರುವರು.

9.30ಕ್ಕೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಅನಂತರ ಜರಗಲಿರುವ ಸಭೆಯಲ್ಲಿ ಶ್ರೀ ಕೃಷ್ಣಾಪುರ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಯಶ್‌ಪಾಲ್‌ ಸುವರ್ಣ, ಎಜಿಇ ಮಣಿಪಾಲ ರಿಜಿಸ್ಟ್ರಾರ್‌ ಡಾ| ರಂಜನ್‌ ಆರ್‌. ಪೈ,  ಡಾ| ಟಿಎಂಎ ಪೈ ಫೌಂಡೇಶನ್‌ ಅಧ್ಯಕ್ಷ ಟಿ. ಅಶೋಕ್‌ ಪೈ, ಎಂಜಿಎಂ ಕಾಲೇಜಿನ ಟ್ರಸ್ಟಿ ವಸಂತಿ ಆರ್‌. ಪೈ, ಮಾಹೆ ವಿ.ವಿ. ಸಹ ಕುಲಾಧಿಪತಿ, ಎಜಿಇ ಮಣಿಪಾಲ ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌, ಮಾಹೆ ವಿ.ವಿ. ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌,ಸಹ ಕುಲಪತಿ ಡಾ| ನಾರಾಯಣ ಸಭಾಹಿತ್‌, ಬೆಂಗಳೂರು ಉತ್ತರ ವಿ.ವಿ. ಕುಲಪತಿ ಡಾ| ನಿರಂಜನ ವಾನಳ್ಳಿ ಭಾಗವಹಿಸುವರು.

ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಅಧ್ಯಕ್ಷತೆ ವಹಿಸುವರು. ಎಜಿಇ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಎಂಜಿಎಂ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ ಎಸ್‌. ನಾಯ್ಕ, ಟಿ. ಮೋಹನದಾಸ ಪೈ ಕೌಶಲಾಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ. ರಂಗ ಪೈ ಉಪಸ್ಥಿತರಿರಲಿದ್ದಾರೆ.

Advertisement

ಬೆಂಗಳೂರು ಸೌತ್‌ ಕರ್ನಾಟಕ ರೀಜನ್‌ನ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ| ಚಂದ್ರಶೇಖರ ಕಾಕುಮನು ಅವರು ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸುವರು. ಮಧ್ಯಾಹ್ನ 12ರಿಂದ ಆಡಳಿತ ಮಂಡಳಿ ಸದಸ್ಯರು, 2 ರಿಂದ ವಿಶ್ರಾಂತ ಪ್ರಾಂಶುಪಾಲರು, ಬೋಧಕರು ಮತ್ತು ಬೋಧಕೇತರರನ್ನು ಗೌರವಿಸಲಾಗುವುದು. 3ರಿಂದ ಸಂಜೆ 5.30ರ ತನಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 5.30ರಿಂದ ಇಂದ್ರಾಳಿ ಯಕ್ಷಗಾನ ಕೇಂದ್ರದವರಿಂದ “ವೀರ ವೃಷಸೇನ ಕಾಳಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ನ. 30ರ ಬೆಳಗ್ಗೆ 8.15ಕ್ಕೆ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಜ್ಯೋತಿ ಹಸ್ತಾಂತರಿಸುವರು.ಎಜಿಇ ಮಣಿಪಾಲ ರಿಜಿಸ್ಟ್ರಾರ್‌ ಡಾ| ರಂಜನ್‌ ಆರ್‌. ಪೈಯವರು ಬೆಳಗ್ಗೆ 9ಕ್ಕೆ ಶೋಭಾಯಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.

ಶೋಭಾಯಾತ್ರೆಯು ಉಡುಪಿಯ ಗಾಂಧಿ ಮೈನ್‌ ಸ್ಕೂಲ್‌ನಿಂದ ಎಂಜಿಎಂ ಕಾಲೇಜು ತನಕ ಸಾಗಿ ಬರಲಿದೆ.

ಡಿ. 1ರ ಮಧ್ಯಾಹ್ನ 3.30ರಿಂದ 5.30ರ ತನಕ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next