Advertisement
ನಗರದ ಅಲ್ ಗಿಸಾಸ್‌ನ ವುಡ್‌ಲ್ಹಾಮ್ ಪಾರ್ಕ್ ಶಾಲೆಯ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ ಉದ್ಯೋಗವನ್ನರಸಿಕೊಂಡು ತಾಯ್ನಾಡಿನ ಕನ್ನಡ ನೆಲದಿಂದ ಬಂದ ಕನ್ನಡಿಗರು ಇಲ್ಲಿ ಸರ್ವರೊಳು ಒಂದಾಗಿ ಕನ್ನಡ ಭಾಷೆ, ಸಾಹಿತ್ಯ, ಅಭಿಮಾನವನ್ನು ಮೆರೆಸುತ್ತಿರುವುದು ಸ್ತುತ್ಯಾರ್ಹ ಕಾರ್ಯ. ಗಡಿನಾಡ ಉತ್ಸವದಂತಹ ಕಾರ್ಯಕ್ರಮಗಳಿಗೆ ದುಬೈಗೆ ಬಂದರೂ ಇಲ್ಲಿನ ಕನ್ನಡ ಪ್ರೇಮ ಕಂಡಾಗ ಕರ್ನಾಟಕದ ಒಳಗಡೆಯೇ ಇರುವಂತೆ ಭಾಸವಾಗುತ್ತಿದೆ. ಇಲ್ಲಿನ ಕನ್ನಡ ಪ್ರೇಮ ಕರ್ನಾಟಕಕ್ಕೆ ಮಾದರಿಯಾಗಿದೆ.
ರಾಜ್ಯಸಭಾ ಸದಸ್ಯಡಾ| ಎಲ್. ಹನುಮಂತಯ್ಯ, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ವಿನ್ಯಾಸಗಾರ ರವೀಂದ್ರ ಕುಮಾರ್ , ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ, ಎಣ್ಮಕಜೆ ಗ್ರಾ. ಪಂ. ಅಧ್ಯಕ್ಷ ಸೋಮಶೇಖರ ಜೆ ಎಸ್., ಮಾಜಿ ಉಪಾಧ್ಯಕ್ಷೆ ಎಎ ಆಯಿಷಾ ಪೆರ್ಲ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಸಮಾಜ ಸೇವಕ ಹರೀಶ್ ಬಂಗೇರ, ಸಂದೀಪ್ ಮೂಲ್ಕಿ, ಅಬುಲ್ ಸಲಾಂ ಚೇವಾರು ಅತಿಥಿಗಳಾಗಿದ್ದರು.
Related Articles
Advertisement
ಗಡಿನಾಡ ರತ್ನ ಪ್ರಶಸ್ತಿ ಪ್ರದಾನಸಮಾಜ ಸೇವೆಯ ಸಾಧನೆಯನ್ನು ಗುರುತಿಸಿ ಜೋಸೆಫ್ ಮಥಾಯಸ್, ಉದ್ಯಮ ಕ್ಷೇತ್ರದಲ್ಲಿ ಅಶ್ರಫ್ ಮಂತೂರ್, ಆರ್ಥಿಕ ತಜ್ಞ ಸಿ.ಎ. ರಮಾನಂದ ಪ್ರಭು ಮಸ್ಕತ್ ಅವರಿಗೆ “ಗಡಿನಾಡ ರತ್ನ ಪ್ರಶಸ್ತಿ’ ಮತ್ತು ಸುಧಾಕರ ರಾವ್ ಪೇಜಾವರ, ಡಾ| ಮಲ್ಲಿಕಾರ್ಜುನ ಎಸ್. ನಾಸಿ, ಅಶ್ರಫ್ ಕಾರ್ಲೆ ಶಾಹುಲ್ ಹಮೀದ್ ತಂಗಳ್ ಮಾಳಿಗೆ, ಆಸೀಫ್ ಮೇಲ್ಪರಂಭ, ಫಾರೂಕ್ ಚಂದ್ರನಗರ ಉಡುಪಿ, ಕಲಿಮಾ ಫೌಂಡೇಶನ್ ಉಡುಪಿ ಇದರ ಅಧ್ಯಕ್ಷರಾದ ಡಾ| ಸಿಬಗತುಲ್ಲ ಶರೀಫ್ ಅವರಿಗೆ ಸಾಧಕ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಅಬ್ದುಲ್ಲ ಮಾದುಮೂಲೆ ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಕಲಾವಿದರಿಂದ “ಮೋಹನ ಮುರಳಿ’ ಯಕ್ಷಗಾನ ನೃತ್ಯ ನಾಟಕ,ಯುಎಇಯ ಪ್ರಸಿದ್ಧ ನೃತ್ಯ ಕಲಾವಿದರಿಂದ “ನೃತ್ಯ ವೈಭವ’, ಯುಎಇಯಲ್ಲಿ ಇರುವ ಗಡಿನಾಡಿನ ಪ್ರಸಿದ್ಧ ಗಾಯಕ ಗಾಯಕಿಯರಿಂದ “ಸಂಗೀತ ರಸಸಂಜೆ’, ಹೆಣ್ಣು ಹುಲಿ ನೃತ್ಯ ಹಾಗೂ ದಫ್ ಮುಟ್ಟ್ ಕಾರ್ಯಕ್ರಮಗಳು ಜನಮನಸೂರೆಗೊಂಡವು.