ಆಲೂರು: ತಾಲೂಕಿನ ದೊಡ್ಡಕಣಗಾಲು ಗ್ರಾಪಂ ವ್ಯಾಪ್ತಿಯ ಉಮಾದೇವರಹಳ್ಳಿ ಗ್ರಾಮದಲ್ಲಿ ಕಳೆದ 6 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಮಹಿಳೆಯರು ಗ್ರಾಮದಲ್ಲೇ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.
ನಿತ್ಯ ದೈನಂದಿನ ಚಟುವಟಿಕೆಗಳಿಗೆ ನೀರಿಲ್ಲದೆ ಗ್ರಾಮಸ್ಥರು ಸುಮಾರು 1 ಕಿ.ಮೀ ದೂರದ ಊರ ಹೊರ ಭಾಗದಲ್ಲಿ ರುವ ಖಾಸಗಿ ಬೋರ್‌ವೆಲ್‌ಹಾಗೂ ಕೊಳವೆ ಬಾವಿಗಳಿಂದ ಮಹಿಳೆಯರುಹಾಗೂ ವಯಸ್ಸಾದವರು ತಲೆ ಮೇಲೆ ಹೊತ್ತುತರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಆ ನೀರು ಕಲುಷಿತಗೊಂಡಿದ್ದು ಕುಡಿಯಲು ಯೋಗ್ಯವಾಗಿಲ್ಲ. ಕುಡಿದರೆ ಅನಾ ರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
ಗ್ರಾಮದ ಮಹಿಳೆ ಪಾರ್ವತಮ್ಮ ಮಾತನಾಡಿ, ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಿ ಎಂದು ಸರ್ಕಾರದ ಆದೇಶ ವಿದ್ದರೂ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದ ನಮ್ಮ ಗ್ರಾಮದಲ್ಲಿ ಕಳೆದ 6 ತಿಂಗಳಿನಿಂದ ಕುಡಿಯಲು ಮತ್ತು ಬಳಸಲು ನೀರಿಲ್ಲದೇ ಪರದಾಡುತ್ತಿದ್ದೇವೆ. ನಮಗೆ ವಯಸ್ಸಾಗಿದೆ. ಊರ ಹೊರಗಿರುವ
ಬೋರ್ವೆಲ್‌ನಿಂದ ನೀರನ್ನು ಕೊಡಗಳಲ್ಲಿ ಒತ್ತು ತರಲು ಕಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಸಮಸ್ಯೆ ಬಗೆಹರಿಸಿಕೊಡಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಮಹಿಳೆ ನೀಲಮ್ಮ ಮಾತನಾಡಿ, ಚುನಾಯಿತಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಅಗತ್ಯಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಆರೇಳು ತಿಂಗಳಿಂದ ನಮಗೆ ಈ ಸಂಕಷ್ಟ ಎದುರಾಗಿದೆ. ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುವು ದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮಹಿಳೆಯರಾದ ನೀಲಮ್ಮ, ಅಕ್ಕಯ್ಯಮ್ಮ, ವೀಣಾ, ಪ್ರಮೀಳಾ ಸೇರಿದಂತೆ ಮುಂತಾದ ವರಿದ್ದರು.