Advertisement
ಮಣಿಪಾಲ : ದೊಡ್ಡ ನಗರವಾಗಿ ಬೆಳೆದಿ ರುವ ಮಣಿಪಾಲದಲ್ಲೂ ಒಳಚರಂಡಿ ವ್ಯವಸ್ಥೆ ಇನ್ನೂ ಜಾರಿಗೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.ಹೊರ ರಾಜ್ಯಗಳ, ವಿದೇಶಗಳ ವಿದ್ಯಾರ್ಥಿಗಳು, ಉದ್ಯೋಗಿಗಳು ಸಾಕಷ್ಟು ಮಂದಿ ಇಲ್ಲಿದ್ದು, ಸ್ಥಳೀಯ ರಿಗೂ ಜೀವನಮಟ್ಟವು ಒಂದಿಷ್ಟು ಸುಧಾರಣೆ ಕಾಣುತ್ತಿದೆ. ಆದರೆ, ನಗರಕ್ಕಿರಬೇಕಾದ ಮೂಲ ಸೌಕರ್ಯ ಒಳಚರಂಡಿ ವ್ಯವಸ್ಥೆ ಇನ್ನೂ ಕಲ್ಪಿಸಬೇಕಿದೆ.
ಮಣಿಪಾಲ ಸುತ್ತಮುತ್ತಲಿನ ಹಲವು ಬಡಾವಣೆಗಳ ಮನೆಯ ಕಲುಷಿತ ನೀರು ಚರಂಡಿಗಳಿಗೆ ಬಿಡಲಾಗು ತ್ತಿದೆ. ಆ ಚರಂಡಿ ಇಕ್ಕೆಲಗಳ ಮೂಲಕ ಮಳೆ ನೀರು
ಹರಿವ ತೋಡುಗಳಿಗೆ ಸಂಪರ್ಕವಾಗುತ್ತವೆ. ಈ ಮಳೆ ನೀರು ಸಾಗುವ ಬಹುತೇಕ ತೋಡುಗಳು ಒಂದಾಗು ವುದು ಮಣ್ಣಪಳ್ಳ ಕೆರೆಯಲ್ಲಿ. ಹಾಗಾಗಿ ನಿತ್ಯವೂ ಸಾಕಷ್ಟು ಪ್ರಮಾಣದ ಬಳಕೆ ಮಾಡಿದ ಕೊಳಚೆ ನೀರು ಮಣ್ಣಪಳ್ಳಕ್ಕೆ ಸೇರುತ್ತಿರುವುದು ಆತಂಕಕಾರಿಯಾಗಿದೆ.
Related Articles
ಗೊಳ್ಳುವ ಅಪಾಯವಿದೆ.
Advertisement
ಪರ್ಕಳಕ್ಕೂ ಒಳಚರಂಡಿಮಣಿಪಾಲದಂತೆ ಪರ್ಕಳ ಸುತ್ತಮುತ್ತಲ ಪರಿಸರದಲ್ಲಿಯೂ ಒಳಚರಂಡಿ ವ್ಯವಸ್ಥೆಯನ್ನು ರೂಪಿಸಬೇಕಿದೆ. ಪ್ರಸ್ತುತ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿಗೊಂಡು ವಾಣಿಜ್ಯ ಕಟ್ಟಡ, ವಸತಿ ಸಮುತ್ಛಯಗಳು ನಿರ್ಮಾಣಗೊಳ್ಳಲಿವೆ. ಭವಿಷ್ಯದ ದೃಷ್ಟಿಯಿಂದ ಪರ್ಕಳದಲ್ಲಿಯೂ ವ್ಯವಸ್ಥಿತ ಒಳಚರಂಡಿ ವ್ಯವಸ್ಥೆ ಬರಬೇಕು ಎನ್ನುತ್ತಾರೆ ಸ್ಥಳೀಯರು. ವಾರಕ್ಕೆ 3 ಬಾರಿ ಔಷಧ ಸಿಂಪಡಣೆ
ಮಣಿಪಾಲದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಬೇಕಾಬಿಟ್ಟಿ ತ್ಯಾಜ್ಯ ಹೊರ ಚೆಲ್ಲುತ್ತಿರುವುದರಿಂದ ಚರಂಡಿಯಲ್ಲಿ ತ್ಯಾಜ್ಯ ನಿಂತು ಸೊಳ್ಳೆ ಉತ್ಪತ್ತಿಯ ತಾಣವಾಗುತ್ತಿದೆ. ಈ ಭಾಗ ಮುರಕಲ್ಲಿನ ಮಣ್ಣು ಆಗಿರುವುದರಿಂದ ನೀರು ಬೇಗನೆ ಇಂಗುವುದಿಲ್ಲ. ಬೇಸಗೆಯಲ್ಲಿ ವಿಪರೀತ ಸೊಳ್ಳೆಕಾಟವಿರುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಪ್ರತೀವರ್ಷ ಇಲ್ಲಿ ಡೆಂಗ್ಯೂ, ಮಲೇರಿಯ ಕಾಯಿಲೆಗಳು ಬಾಧಿಸುತ್ತಿವೆ. ಸ್ಥಳೀಯ ನಗರಸಭಾ ಸದಸ್ಯರ ಮನವಿಯಂತೆ ವಾರಕ್ಕೆ ಮೂರು ಬಾರಿ ಚರಂಡಿಯಲ್ಲಿ ನಿಂತ ತ್ಯಾಜ್ಯ ನೀರಿಗೆ ಪೌರಕಾರ್ಮಿಕರು ಔಷಧ ಸಿಂಪಡಿಸುತ್ತಿದ್ದಾರೆ. ಅನಧಿಕೃತ ಪಿಜಿ
ಹುಡ್ಕೊ, ಅನಂತನಗರ ಸಹಿತ ಮಣಿಪಾಲದ ವಿವಿಧೆಡೆ ಅನಧಿಕೃತ ಪಿಜಿಗಳ (ಪೇಯಿಂಗ್ ಗೆಸ್ಟ್) ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಸ್ಥಳೀಯರು. ನಗರಸಭೆಯಿಂದ ಸೂಕ್ತ ಅನುಮತಿ ಪಡೆಯದೆ ಸಣ್ಣಸಣ್ಣ ರೂಂಗಳಲ್ಲಿ ವಿದ್ಯಾರ್ಥಿಗಳನ್ನು, ಉದ್ಯೋಗಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಸಾಕಷ್ಟು ಪ್ರಮಾಣದ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದ್ದು, ಇದೆಲ್ಲವೂ ತೋಡಿಗೆ ಹರಿಯುತ್ತಿದೆ. ಜತೆಗೆ ಇಲ್ಲಿನ ಕೆಲವು ಹೊಟೇಲ್‌ಗಳು, ವಸತಿ ಗೃಹಗಳೂ ಇದೇ ಮಾರ್ಗ ಅನುಸರಿಸುತ್ತಿವೆ. ತ್ಯಾಜ್ಯ, ಶೌಚಗುಂಡಿಯ ಪೈಪ್‌ಗ್ಳ ಸಂಪರ್ಕವನ್ನೂ ಮಳೆ ನೀರು ಹರಿಯುವ ತೋಡಿಗೆ ಕಲ್ಪಿಸಿದ್ದಾರೆಂಬ ದೂರೂ ಕೇಳಿಬಂದಿದೆ.