Advertisement
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಶಿರಗುಂಪಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಶಾಲಾ ಮಕ್ಕಳಿಗೆ ಬಯಲೇ ಶೌಚಾಲಯವಾಗಿದೆ. ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಒಟ್ಟು 205 ಮಕ್ಕಳು ಓದುತ್ತಿದ್ದಾರೆ. 7ಜನ ಶಿಕ್ಷಕರೂ ಇದ್ದಾರೆ. ಇದರಲ್ಲಿ 4ಜನ ಶಿಕ್ಷಕರಿಯರು ಇದ್ದಾರೆ. 100ಕ್ಕೂ ಹೆಚ್ಚು ವಿದ್ಯಾರ್ಥಿನಿರು ಇದ್ದಾರೆ. ಆದರೆ ಶಾಲೆಯಲ್ಲಿ ಮೂತ್ರ ವಿಸರ್ಜನೆಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಲ್ಲಿಯ ಮಕ್ಕಳು ಅನಿವರ‍್ಯವಾಗಿ ಬಯಲಿಗೆ ಹೋಗಬೇಕು. ಆದರೆ ಈ ಶಾಲೆಯ ವಿದ್ಯಾರ್ಥಿನಿಯರ ಪಾಡು ಹೇಳತ್ತಿರದು.
Related Articles
Advertisement
ಜಿಲ್ಲಾ ಪಂಚಾಯಿತಿಯ ಸಿಇಓ ಒಬ್ಬ ಮಹಿಳೆಯಾಗಿದ್ದು ಈ ಶಾಲೆಯ ವಿದ್ಯಾರ್ಥಿನಿಯರ ಕಷ್ಟವನ್ನು ಕೇಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಅವರು ಕುಷ್ಟಗಿ ತಾಲೂಕಿನ ಅನೇಕ ಗ್ರಾಪಂಗಳಿಗೆ ಭೇಟಿ ನೀಡಿದ್ದಾರೆ. ಆದರೆ ಈ ಭಾಗದ ಗ್ರಾಪಂಗಳಿಗೆ ಒಮ್ಮೆ ಭೇಟಿ ನೀಡಿಲ.್ಲ ಇನ್ನಾದರೂ ಈ ಕಡೆ ಭೇಟಿ ನೀಡಿ ಇಂಥ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುವುದು ಪ್ರಜ್ಞಾವಂತರ ಕಳಕಳಿಯಾಗಿದೆ.
ಶಾಲೆಯಲ್ಲಿ ಶೌಚಾಲಯದ ಸಮಸ್ಯೆ ಇದೆ. ಇದರ ಬಗ್ಗೆ ಕಳೆದ 1-2 ವರ್ಷಗಳಿಂದ ಗ್ರಾಪಂ ಇಲಾಖೆಗೆ ಶೌಚಾಲಯ ಕಟ್ಟಿಸಿ ಕೊಡಿ ಎಂದು 4-5 ಬಾರಿ ಮನವಿ ಪತ್ರ ಸಲಿಸಿದರು ಯಾವುದೇ ಪ್ರಯೋಜನವಾಗಿಲ್ಲ, ಗ್ರಾಪಂ ಕಚೇರಿಗೆ ಅಲೇದಾಡಿ ಸಾಕಾಗಿದೆ.– ಶಿವಪ್ಪ. ಬಿ ಮುಖ್ಯೋಪಾಧ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿರಗುಂಪಿ. ಈಲ್ಲೆಯ ಯಾವು ಶಾಲೆಗಳಲ್ಲಿ ಶೌಚಾಲಯಗಳು ಇಲ್ಲ. ಅಂತ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ತಿಳಿಸಲಾಗಿದೆ. ಆದರೆ ಶಿರಗುಂಪಿ ಪ್ರಾಥಮಿಕ ಶಾಲೆಗೆ ಇನ್ನೂ ಶೌಚಾಲಯ ನಿರ್ಮಿಸಿಲ್ಲ ಎಂದರೆ ಕೂಡಲೇ ಶೌಚಾಲಯ ನಿರ್ಮಿಸಲು ಕ್ರಮಕೈಗೋಳ್ಳುತ್ತೇವೆ
– ಬಿ. ಫೌಜಿಯಾ ತರನ್ನುಮ್. ಜಿಪಂ ಸಿಇಒ ಕೊಪ್ಪಳ. – ಮಲ್ಲಿಕಾರ್ಜುನ ಮೆದಿಕೇರಿ. ದೋಟಿಹಾಳ