Advertisement

ದೊಡ್ಡಬಳ್ಳಾಪುರ ನಗರಸಭೆ: ಅತಂತ್ರ ಫ‌ಲಿತಾಂಶ

03:49 PM Sep 07, 2021 | Team Udayavani |

ದೊಡ್ಡಬಳ್ಳಾಪುರ: ನಗರಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಮೇಲುಗೆ„ ಸಾಧಿಸಿದೆ. 31 ವಾರ್ಡ್‌ಗಳ ಪೈಕಿ ಬಿಜೆಪಿ-12 ಕಾಂಗ್ರೆಸ್‌ -9, ಜೆಡಿಎಸ್‌-7, ಪಕ್ಷೇತರ-3, ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಆದರೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹು ಮತ ದೊರೆಯದೆ ಅಂತಂತ್ರ ಸ್ಥಿತಿ ನಿರ್ಮಾಣವಾಗಿದೆ.

Advertisement

ಸ್ಪಷ್ಟ ಬಹುಮತಕ್ಕೆ 16 ಸ್ಥಾನಗಳ ಅಗತ್ಯವಿದ್ದು, ಯಾವ ಪಕ್ಷಗಳು ಮೈತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ ಎನ್ನುವುದು ಕುತೂಹಲ ವಾಗಿದೆ.

ಕಾರ್ಯಕರ್ತರ ಸಂಭ್ರಮ: ಬೆಳಗ್ಗೆ 8ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ ಯಾವುದೇ ಅಡೆತಡೆಗಳಿಲ್ಲದೇ ಸುಗಮವಾಗಿ ನಡೆಯಿತು. ಬೆಳಿಗ್ಗೆ 10.30ರ ವೇಳೆಗೆ ಬಹುತೇಕ ಫಲಿತಾಂಶ ಹೊರಬಿದ್ದಿತ್ತು. ಮತ ಎಣಿಕೆ ಕೇಂದ್ರದ ಹೊರಗಡೆ ಕಾರ್ಯಕರ್ತರು ಗೆದ್ದ ಅಭ್ಯರ್ಥಿಗಳಿಗೆ ಹಾರಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಹಿಂದಿನ ಫ‌ಲಿತಾಂಶ: 2013ರಲ್ಲಿ 31 ಸ್ಥಾನಗಳ ಪೈಕಿ ಜೆಡಿಎಸ್‌ -14, ಬಿಜೆಪಿ-6, ಕಾಂಗ್ರೆಸ್‌-4, ಕನ್ನಡ ಪಕ್ಷ-2, ಪಕ್ಷೇತರ- 5 ಸ್ಥಾನಗಳು ಗಳಿಸಿದ್ದವು. ರಾಜ್ಯದ ಆಡಳಿತಾರೂಢ ಬಿಜೆಪಿ ಪಕ್ಷದಿಂದ 12 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕಳೆದ ಬಾರಿಗಿಂತ 6 ಸ್ಥಾನ ಹೆಚ್ಚು ಗಳಿಸಿದೆ. ಕ್ಷೇತ್ರ ಶಾಸಕರು ಕಾಂಗ್ರೆಸ್‌ ಪಕ್ಷದವರಾಗಿದ್ದು, ಕಾಂಗ್ರೆಸ್‌ ಕಳೆದ ಸಾಲಿಗಿಂತ 5 ಸ್ಥಾನ ಹೆಚ್ಚು ಗಳಿಸಿವೆ. ಇನ್ನು 14 ಸ್ಥಾನ ಪಡೆದಿದ್ದ ಜೆಡಿಎಸ್‌ ಈ ಬಾರಿ 7 ಸ್ಥಾನ ಕಳೆದುಕೊಂಡಿದ್ದು, ಬರೀ 7ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಇದನ್ನೂ ಓದಿ:ಆಸೆಗಣ್ಣಿನ ಗೊಂಬೆ ಟು ‘ಹುಣ್ಸ್ ಮಕ್ಕಿ ಹುಳ’ : ಬೆಂದ ಬದುಕಿನ ಸ್ಫೂರ್ತಿದಾಯಕ ನಡೆ  

Advertisement

ಪಕ್ಷತರರು ಈ ಬಾರಿ 3 ಸ್ಥಾನ ಪಡೆದಿದ್ದಾರೆ. ಕಳೆದ ಚುನಾವಣೆಯಲ್ಲಿ 2 ಸ್ಥಾನಗಳಿಸಿದ್ದ ಕನ್ನಡ ಪಕ್ಷದಿಂದ ಈ ಬಾರಿ ಐವರು ಸ್ಪರ್ಧಿಸಿದ್ದು
ಯಾರೊಬ್ಬರು ಗೆಲುವು ಸಾಧಿಸಿಲ್ಲ. ಉಳಿದಂತೆ ಸಿಪಿಐ(ಎಂ) ಬಿಎಸ್‌ಪಿ, ಕೆ.ಆರ್‌.ಎಸ್‌, ಉತ್ತಮ ಪ್ರಜಾಕೀಯ ಪಕ್ಷ , ಎಸ್‌.ಡಿ.ಪಿ.ಐ ಪಕ್ಷಗಳು ಸ್ಥಾನಗಳಿಸಿಲ್ಲ. ನಗರದಲ್ಲಿ ವಿವಿಧ ಸಮಸ್ಯೆಗಳ ವಿರುದ್ಧ ದನಿ ಎತ್ತಿಹೋರಾಟದಲ್ಲಿತೊಡಗಿಸಿಕೊಳ್ಳುತ್ತಿದ್ದಸಿಪಿಐ(ಎಂ) ಹಾಗೂ ಕನ್ನಡ ಪಕ್ಷದ ಅಭ್ಯರ್ಥಿಗಳಿಗೆ ಮತದಾರ ಒಲಿಯದಿರುವುದು ಯಕ್ಷ ಪ್ರಶ್ನೆಯಾಗಿದೆ. ಪಕ್ಷೇತರ ಅಭ್ಯರ್ಥಿಗಳ ಪೈಕಿ ಒಬ್ಬರು ಪಕ್ಷದಲ್ಲಿ ಟಿಕೆಟ್‌
ದೊರೆಯದೆ ಬಿಜೆಪಿ, ಕಾಂಗ್ರೆಸ್‌,ಜೆಡಿಎಸ್‌ನಿಂದ ಒಬೊಬ್ಬ ಅಭ್ಯರ್ಥಿ ಬಂಡಾಯವಾಗಿ ಸ್ಪರ್ಧಿಸಿದ್ದರು.

ಗೆದ್ದ ಪ್ರಮುಖರು: ಮಾಜಿ ಅಧ್ಯಕ್ಷರಾಗಿದ್ದ ಟಿ.ಎನ್‌. ಪ್ರಭುದೇವ(ಜೆಡಿಎಸ್‌),ಎಂ.ಜಿ.ಶ್ರೀನಿವಾಸ(ಕಾಂಗ್ರೆಸ್‌), ಎಂ.ಮಲ್ಲೇಶ್‌ (ಜೆಡಿಎಸ್‌), ಎಚ್‌.ಎಸ್‌.ಶಿವಶಂಕರ್‌ (ಬಿಜೆಪಿ), ವಿ.ಎಸ್‌ ರವಿಕುಮಾರ್‌(ಜೆಡಿಎಸ್‌)

ಸೋತ ಪ್ರಮುಖರು: ಆರ್‌.ಕೆಂಪರಾಜು(ಜೆಡಿಎಸ್‌), ಕೆ.ಬಿ.ಮುದ್ದಪ್ಪ(ಬಿಜೆಪಿ), ಜಯಮ್ಮ ಮುನಿರಾಜು (ಕನ್ನಡ ಪಕ್ಷ), ಡಿ.ಎಂ.ಚಂದ್ರಶೇಖರ್‌ (ಬಿಜೆಪಿ), ಜಿ. ಎಸ್‌.ಸೋಮರುದ್ರಶರ್ಮಾ(ಕಾಂಗ್ರೆಸ್‌), ಕೆ.ಪಿ.ಜಗನ್ನಾಥ್‌(ಕಾಂಗ್ರೆಸ್‌,ಎಸ್‌.ಸುಶೀಲ ರಾಘವ(ಬಿಜೆಪಿ), ವಸುಂದರಾ ದೇವಿ(ಕಾಂಗ್ರೆಸ್‌),,ಡಿ.ಪಿ.ಆಂಜನೇಯ(ಕನ್ನಡಪಕ್ಷ)ಎ.ನಟರಾಜ್‌ (ಕಾಂಗ್ರೆಸ್‌),ಎನ್‌.ಆಂಜನಾಮೂರ್ತಿ(ಕಾಂಗ್ರೆಸ್‌), ಎನ್‌.ಕೆ.ರಮೇಶ್‌ (ಬಿಜೆಪಿ),ಶಿವಕುಮಾರ್‌(ಜೆಡಿಎಸ್‌)ನಗರಸಭೆ ಮಾಜಿ ಅಧ್ಯಕ್ಷರಾಗಿದ್ದ ಕೆ.ಬಿ.ಮುದ್ದಪ್ಪ(ಬಿಜೆಪಿ)ಕೆ.ಪಿ.ಜಗನ್ನಾಥ್‌ (ಕಾಂಗ್ರೆಸ್‌)

ಯಾರೊಂದಿಗೆ ಮೈತ್ರಿ? ನಗರಸಭೆ ಆಡಳಿತಕ್ಕೆ ಸರಳ ಬಹುಮತ 16 ಮ್ಯಾಜಿಕ್‌ ಸಂಖ್ಯೆ ಯಾವ ಪಕ್ಷವು ಪಡೆದಿಲ್ಲ. ಹೀಗಾಗಿ ಅತಂತ್ರವಾಗಿರುವ
ನಗರಸಭೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ. ಪಕ್ಷೇತರರನ್ನು ಹೊರತು ಪಡಿಸಿ ಜೆಡಿಎಸ್‌, ಕಾಂಗ್ರೆಸ್‌ ಒಂದಾದರೆ ಸರಳ ಬಹುಮತ 16 ಹಾಗೂ ಶಾಸಕರ ಒಂದು ಮತ ಸೇರಿದರೆ 17 ಸ್ಥಾನಗಳಾಗಲಿವೆ. ಬಿಜೆಪಿ, ಪಕ್ಷೇತರರು ಹಾಗೂ ಸಂಸತ್‌ ಸದಸ್ಯರ ಒಂದು ಮತ ಸೇರಿದರೆ ಸರಳ ಬಹುಮತ 16 ಆಗಲಿದೆ. ಬಿಜೆಪಿ ಜೆಡಿಎಸ್‌ ಮೈತ್ರಿ ಆಗುವ ಸಂಭವವಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next