Advertisement

ಇವಿಎಂ-ವಿವಿ ಪ್ಯಾಟ್‌ ಯಂತ್ರಗಳ ಸಂದೇಹವೇ ಬೇಡ

02:34 PM Apr 20, 2018 | |

ಬಳ್ಳಾರಿ: ಚುನಾವಣೆಗೆ ಸಂಬಂಧಿಸಿದ ಇವಿಎಂ ಮತ್ತು ವಿವಿಪ್ಯಾಟ್ಸ್‌ ಯಂತ್ರಗಳು ಅತ್ಯಂತ ನಿಖರತೆಯಿಂದ ಕೂಡಿದ್ದು, ಇವುಗಳ ಬಗ್ಗೆ ಯಾವುದೇ ರೀತಿಯ ಗೊಂದಲ ಮತ್ತು ಸಂದೇಹಗಳು ಬೇಡ ಎಂದು ಚುನಾವಣಾ ಮಾಸ್ಟರ್‌ ಟ್ರೇನರ್‌ ಸುರೇಶಬಾಬು ಹೇಳಿದರು. ಜಿಲ್ಲಾ ನ್ಯಾಯಾಲಯದ ಬಾರ್‌ ಅಸೋಸಿಯೇಶನ್‌ ಸಭಾಂಗಣದಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್‌ಗಳಿಗೆ ಸಂಬಂಧಿಸಿದಂತೆ ಗುರುವಾರ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಚುನಾವಣೆಗೆ ಸಂಬಂಧಿಸಿದಂತೆ ಇವಿಎಂ ಮತ್ತು ವಿವಿ ಪ್ಯಾಟ್ಸ್‌ಗಳು ಅತ್ಯಂತ ನಿಖರತೆಯಿಂದ ಕೂಡಿವೆ. ಮತದಾರರು ತಾವು ಹಾಕಿ ಮತ ಯಾವ ಅಭ್ಯರ್ಥಿಗೆ ಬಿದ್ದಿದೆ ಎಂಬುದನ್ನು ವಿವಿ ಪ್ಯಾಟ್ಸ್‌ ಮಶೀನ್‌ ಖಚಿತಪಡಿಸಲಿದ್ದು, ವಿವಿ ಪ್ಯಾಟ್‌ ಮಷಿನ್‌ 7 ಸೆಕೆಂಡ್‌ಗಳ ಕಾಲ ಪ್ರದರ್ಶಿಸುವ ಚೀಟಿಯಲ್ಲಿ ಸೂಚಿಸಿದ ಅಭ್ಯರ್ಥಿಗೆ ಮತ ಬಿದ್ದಿದೆಯಾ, ಅಭ್ಯರ್ಥಿಯ ಕ್ರಮ ಸಂಖ್ಯೆಯನ್ನು ವೀಕ್ಷಿಸಿ, ಖಚಿತ ಪಡಿಸಿಕೊಳ್ಳಬಹುದಾಗಿದೆ. ವಿವಿ ಪ್ಯಾಟ್‌ ಪೆಟ್ಟಿಗೆಯಲ್ಲಿ ಸಂಗ್ರಹವಾಗುವ ಅಭ್ಯರ್ಥಿಗಳಿಗೆ ಹಾಕಿದ ಮತದ ಚೀಟಿಗಳನ್ನು 5 ವರ್ಷಗಳ ಕಾಲ ಅವುಗಳನ್ನು ಭದ್ರವಾಗಿ ಸಂಗ್ರಹಿಸಿಡಲಾಗುವುದು ಎಂದು ತಿಳಿಸಿದರು.

ಇವಿಎಂ ಮತ್ತು ವಿವಿ ಪ್ಯಾಟ್ಸ್‌ಗಳ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರವಾಗಿ ಸುರೇಶಬಾಬು ಅವರು ಸಭೆಗೆ ತಿಳಿಸಿದರು. ಸಭೆಯಲ್ಲಿದ್ದ ನ್ಯಾಯಾಧೀಶರು ಮತ್ತು ವಕೀಲರು ಮತ ಹಾಕುವುದರ ಮೂಲಕ ತಮ್ಮ ಮತ ಯಾವ ಅಭ್ಯರ್ಥಿಗಳಿಗೆ ಹಾಕಿದ್ದೇವೆ ಎಂಬುದನ್ನು ಕನ್ಪರ್ಮ್ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ.ಸಿ.ಬಿರಾದಾರ್‌, ನ್ಯಾಯಾಧೀಶರಾದ ಕ್ಯಾತ್ಯಾಯಿನಿ, ಎಸ್‌.ಬಿ.ಹಂದ್ರಾಳ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗೇಶ ಬಿಲ್ವಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಎಸ್‌. ಬದರಿನಾಥ, ಕಾರ್ಯದರ್ಶಿ ರವಿರಾಜಶೇಖರ ರೆಡ್ಡಿ, ಇವಿಎಂ ಮತ್ತು ವಿವಿ ಪ್ಯಾಟ್‌ ನೋಡಲ್‌ ಅಧಿಕಾರಿ ವಿಠ್ಠಲರಾಜು, ಮಾಸ್ಟರ್‌ ಟ್ರೇನರ್‌ ಪನಮೇಶಲು ಮತ್ತು ಜಿಲ್ಲಾ ಚುನಾವಣಾ ಆಯೋಗದ ಸಿಬ್ಬಂದಿ ನಿರಂಜನ ಮೂರ್ತಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next