Advertisement

ದೀಪಾವಳಿ: ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳ

12:21 AM Oct 30, 2019 | Lakshmi GovindaRaju |

ಬೆಂಗಳೂರು: ದೀಪಾವಳಿ ಪಟಾಕಿ ಹಿನ್ನೆಲೆ ನಗರದಲ್ಲಿ ತುಸು ವಾಯು ಹಾಗೂ ಶಬ್ಧ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದ್ದು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯ ತಪಾಸಣೆಯಿಂದ ತಿಳಿದುಬಂದಿದೆ.

Advertisement

ಭಾನುವಾರ ಹಾಗೂ ಸೋಮವಾರದಂದು ಬಸವೇಶ್ವರನಗರ, ಹೆಬ್ಬಾಳ, ಜಯನಗರ, ಮೈಸೂರು ರಸ್ತೆಯಲ್ಲಿ ವಾಯು ಮಾಲಿನ್ಯ ಪ್ರಮಾಣವು ಹಾಗೂ ದೊಮ್ಮಲೂರು, ವಿಜಯನಗರ, ಎಚ್‌ಎಸ್‌ಆರ್‌ ಬಡಾವಣೆ, ಯಲಹಂಕ, ಇಂದಿರಾನಗರ, ಜಯನಗರದಲ್ಲಿ ಶಬ್ದ ಮಾಲಿನ್ಯವು ಸಾಮಾನ್ಯಕ್ಕಿಂತ ತುಸು ಹೆಚ್ಚು ವರದಿಯಾಗಿದೆ.

ಹಬ್ಬದ ಸಂದರ್ಭದಲ್ಲಿ ಉಂಟಾಗುವ ಮಾಲಿನ್ಯ ಅಳತೆ ಮಾಡುವ ನಿಟ್ಟಿನಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯು ನಗರದ 20 ಕಡೆ ವಾಯು ಮಾಲಿನ್ಯ ಪರಿಚ್ಛೇದಕಗಳು ಹಾಗೂ 10 ಕಡೆ ಶಬ್ಧ ಮಾಲಿನ್ಯ ಪರಿವೇಷ್ಟಕಗಳನ್ನು ಅಳವಡಿಸಿತ್ತು.

ಅದರಲ್ಲಿ ಸಾಮಾನ್ಯ ಮಾಲಿನ್ಯ ಪ್ರಮಾಣವು ಎಷ್ಟು ಎಂಬುದನ್ನು ಅ.21 ರಂದು ದಾಖಲಿಸಿತ್ತು. ಭಾನುವಾರ ಹಾಗೂ ಸೋಮವಾರ ತಪಾಸಣೆ ನಡೆದ ಬಹುತೇಕ ಭಾಗಗಳಲ್ಲಿಯೂ ಪಟಾಕಿಯಿಂದ ಸಾಧಾರಣ ಪ್ರಮಾಣಕ್ಕಿಂತ ಮಾಲಿನ್ಯ ಹೆಚ್ಚಳಾವಾಗಿರುವ ಕುರಿತು ದಾಖಲಾಗಿದೆ ಎಂದು ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೀಪಾವಳಿ ಮೊದಲ ದಿನ ಭಾನುವಾರ ಮೊದಲ ದಿನ ನಗರದಲ್ಲಿ ಮಳೆಯಾದ ಪರಿಣಾಮ ಅಂದು ವಾಯುಮಾಲಿನ್ಯ ಸಾಮಾನ್ಯಕ್ಕಿಂತ ಮೂರ್‍ನಾಲ್ಕು ಮೈಕ್ರೋಗ್ರಾಂ ಪರ್‌ ಕ್ಯೂಬಿಕ್‌ ಮೀಟರ್‌ನಷ್ಟು ಮಾಲಿನ್ಯ ಹೆಚ್ಚಳವಾಗಿದೆ. ಆದರೆ, ಸೋಮವಾರ ನಗರದಲ್ಲಿ ಪಟಾಕಿ ಸದ್ದು ಹೆಚ್ಚು ಕೇಳಿಸಿದ್ದರಿಂದ ಕೆವು ಕಡೆ 10 ರಿಂದ 15 ಮೈಕ್ರೋಗ್ರಾಂ ಪರ್‌ ಕ್ಯೂಬಿಕ್‌ ಮೀಟರ್‌ನಷ್ಟು ಮಾಲಿನ್ಯ ಪ್ರಮಾಣ ಏರಿಕೆಯಾಗಿದೆ.

Advertisement

ಮಾಲಿನ್ಯ ಹೆಚ್ಚಳವಾಗಿರುವ ವಿವರ (ಮೈಕ್ರೋಗ್ರಾಂ ಪರ್‌ ಕ್ಯೂಬಿಕ್‌ ಮೀಟರ್‌ )
ಸ್ಥಳ – ಸಾಮಾನ್ಯ ದಿನ- ಅ.27- ಅ.28
ಬಸವೇಶ್ವರನಗರ 51 91 73
ಹೆಬ್ಬಾಳ ಪಶುವೈದ್ಯಕೀಯ ವಿವಿ 46 69 86
ಜಯನಗರ 5ನೇ ಹಂತ 75 97 89
ಮೈಸೂರು ರಸ್ತೆ 73 68 88

ಎಕ್ಯೂಐ ಮಟ್ಟ
0-50- ಉತ್ತಮ (ಹೆಚ್ಚಿನ ಪರಿಣಾಮವಿಲ್ಲ)
51-100 ಸಮಾಧಾನಕರ (ಉಸಿರಾಟದ ಸಮಸ್ಯೆ ಇರುವವರಿಗೆ ತುಸು ತೊಡಕು )
101-200-ಸಾಧಾರಣ (ಚಿಕ್ಕ ಮಕ್ಕಳು, ಹೃದಯ ಮತ್ತು ಶ್ವಾಸಕೋಶದ ಸಮಸ್ಯೆ ಇರುವವರಿಗೆ ಉಸಿರಾಟದ ತೊಂದರೆ)
201-300 ಕಳಪೆ (ಉಸಿರಾಟದ ಸಮಸ್ಯೆ ಹೆಚ್ಚುತ್ತದೆ)

ಶಬ್ದ ಮಾಲಿನ್ಯ ಡೆಸಿಬಲ್‌ಗ‌ಳಲ್ಲಿ
ಸ್ಥಳ – ಸಾಮಾನ್ಯದಿನ -ಅ.27 -ಅ.28
ದೊಮ್ಮಲೂರು 56.7 57.7 64.1
ವಿಜಯನಗರ ಕ್ಲಬ್‌ 62.4 82.7 68.5
ಎಚ್‌ಎಸ್‌ಆರ್‌ ಬಡಾವಣೆ 69.6 74.8 75.8
ಯಶವಂತಪುರ ಠಾಣೆ 69.0 68.7 71.3
ಯಲಹಂಕ 75.7 73.5 85.7
(ಶಬ್ದ ಮಾಲಿನ್ಯವು 75 ಡೆಸಿಬಲ್‌ಗ‌ಳಿಗಿಂತ ಹೆಚ್ಚಿದ್ದರೆ ಕಿವಿ ತಮಟೆಗೆ ಸಮಸ್ಯೆ.)

Advertisement

Udayavani is now on Telegram. Click here to join our channel and stay updated with the latest news.

Next