Advertisement

ಜಿಲ್ಲಾಸ್ಪತ್ರೆ ಅವ್ಯವಸ್ಥೆ:ಬಿಜೆಪಿರಾಜ್ಯಾಧ್ಯಕ್ಷರಿಗೆ ವರದಿ

11:13 AM Sep 01, 2017 | |

ಕಲಬುರಗಿ: ಜಿಲ್ಲಾಸ್ಪತ್ರೆ ಅವ್ಯವಸ್ಥೆ ಹಾಗೂ ಶಿಶು ಸಾವಿನ ಪ್ರಕರಣ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೆ
ಸಮಗ್ರ ವರದಿ ಸಲ್ಲಿಸುವುದಾಗಿ ಬಿಜೆಪಿ ಶಿಶು ಮರಣ ಅಧ್ಯಯನ ಸಮಿತಿ ಪ್ರಮುಖ, ಶಾಸಕ ಸುರೇಶಕುಮಾರ ತಿಳಿಸಿದರು.

Advertisement

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಂತರ ಸಮಿತಿ ಸದಸ್ಯರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು, ಆಸ್ಪತ್ರೆಯ ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಒಂದೇ ಬೆಡ್‌ ಮೇಲೆ
ಮೂರ್‍ನಾಲ್ಕು ಮಕ್ಕಳನ್ನು ಮಲಗಿಸಿ ಚಿಕಿತ್ಸೆ ನೀಡುತ್ತಿರುವುದರಿಂದ ಒಂದು ಮಗುವಿನ ಸೊಂಕು
ಮತ್ತೂಂದು ಮಗುವಿಗೆ ತಗುಲುತ್ತಿದೆ. ಪ್ರಮುಖವಾಗಿ ಮಕ್ಕಳಿಗೆ ನೀಡಲಾಗುವ ಸಪೆìಕ್ಟರ್‌
ಚುಚ್ಚುಮದ್ದು ಇಲ್ಲದೇ ಇರುವುದು ಶಿಶುಗಳ ಸಾವಿಗೆ ಕಾರಣವಾಗಿದೆ ಎನ್ನುವುದು ಗಮನಕ್ಕೆ ಬಂದಿದೆ
ಎಂದು ವಿವರಿಸಿದರು.

ಶಿಶುಗಳ ತುರ್ತು ಘಟಕದಲ್ಲಿ 22 ಬೆಡ್‌ಗಳಿದ್ದರೂ ಕೇವಲ ಮೂರು ವೆಂಟಿಲೇಟರ್‌ ಇವೆ. ಸಿಬ್ಬಂದಿ ಕೊರತೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಆರೋಗ್ಯ ಸಚಿವರ ಜಿಲ್ಲೆ ಕೋಲಾರದಲ್ಲಿ ಒಂದು ನಿಟ್ಟಿನ ಅವ್ಯವಸ್ಥೆಯಿದ್ದರೆ, ವೈದ್ಯಕೀಯ ಶಿಕ್ಷಣ ಸಚಿವರ ಜಿಲ್ಲೆ ಕಲಬುರಗಿ ಜಿಲ್ಲೆಯಲ್ಲಿ ಮಗದೊಂದು ನಿಟ್ಟಿನಲ್ಲಿ
ಸಮಸ್ಯೆಯಿದೆ. ಇದು ಸರ್ಕಾರದ ಆಡಳಿತ ವೈಖರಿ ನಿರೂಪಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಶಸ್ವಿನಿ, ವಾಜಪೇಯಿ ಆರೋಗ್ಯ ಶ್ರೀ ಸೇರಿದಂತೆ ಸರ್ಕಾರ ಎಲ್ಲ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ವಿಲೀನಗೊಳಿಸಿ ಏಕರೂಪದ ಆರೋಗ್ಯ ಭಾಗ್ಯ ನೀಡುವ ಯೋಜನೆ ರೂಪುರೇಷೆ ಇನ್ನೂ ಸಂಪೂರ್ಣ ಗೊತ್ತಾಗಿಲ್ಲ. ಬಹುಶಃ ವಾಜಪೇಯಿ ಅವರ ಹೆಸರು ಹೆಸರು ತೆಗೆದು ಹಾಕುವ ಏಕೈಕ ಉದ್ದೇಶವೂ ಇರಬಹುದು ಎನ್ನುವ ಶಂಕೆ ಕಾಡಲಾರಂಭಿಸಿದೆ ಎಂದು ಹೇಳಿದರು.

ಶಾಸಕರಾದ ಭಾರತಿ ಶೆಟ್ಟಿ, ಅಶ್ವತ್ಥ್ನಾರಾಯಣ, ದತ್ತಾತ್ರೇಯ ಪಾಟೀಲ ರೇವೂರ, ಅಮರನಾಥ ಪಾಟೀಲ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಶೀಲ ನಮೋಶಿ, ಡಾ| ಈರಣ್ಣ ಹೀರಾಪುರ, ಎಸ್‌. ಪ್ರಕಾಶ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next