Advertisement

Ballari: ಬಿಮ್ಸ್‌ನಲ್ಲಿ ಬಾಣಂತಿಯರ ಸರಣಿ ಸಾವಿನ ಬೆನ್ನಲ್ಲೇ ಮತ್ತೊಂದು ಮೃತ್ಯು!

09:50 PM Dec 05, 2024 | Team Udayavani |

ಬಳ್ಳಾರಿ: ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಮಾಸುವ ಮುನ್ನವೇ ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶುವೊಂದು ಮೃತಪಟ್ಟಿದೆ‌‌.. ನಾರ್ಮಲ್ ಹೆರಿಗೆಗೆ ಎಂದು ದಾಖಲಾಗಿದ್ದ ಗರ್ಭಿಣಿಗೆ ವೈದ್ಯರು ಏಕಾಏಕಿ ಸಿಜೇರಿಯನ್ ಮಾಡಿದ್ದರು ಜೊತೆಗೆ ಮಗು ಕೂಡ ಚೆನ್ನಾಗಿದೆ ಅಂತಾ ಹೇಳಿದ್ರು, ಆದರೆ ಅರ್ಧ ಗಂಟೆ ಬಿಟ್ಟು ಮಗು ಮೃತಪಟ್ಟಿದೆ ಅಂತಾ ಹೇಳಿದ್ದಾರೆ ಹೀಗಾಗಿ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಸಿರಗುಪ್ಪ ಬಳಿಯ ಸಿರಗೇರ ಗ್ರಾಮದ ಗಂಗೋತ್ರಿ ಎನ್ನುವರು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಗಂಗೋತ್ರಿಗೆ ಈ ಹಿಂದೆ ನಾರ್ಮಲ್ ಡೆಲಿವರಿ ಆಗಿದ್ದರಿಂದ ಈ ಬಾರಿಯೂ ನಾರ್ಮಲ್ ಆಗುತ್ತೆ ಎಂದು ವೈದ್ಯರು ಹೇಳಿದ್ದರು. ತಡ ರಾತ್ರಿಯೇ ಗಂಗೋತ್ರಿಗೆ ನೋವು ಶುರುವಾಗಿದ್ದು, ಬೆಳಗ್ಗೆ ಒದ್ದಾಡಲು ಆರಂಭಿಸಿದ್ದಾರೆ. ಅಲ್ಲಿ ತನಕ ಸುಮ್ಮನಿದ್ದ ವೈದ್ಯರು ಕೂಡಲೇ ಸಿಜೇರಿಯನ್ ವಾರ್ಡ್​​ಗೆ ಶಿಫ್ಟ್​ ಮಾಡಿದ್ದಾರೆ. ಬಳಿಕ ಗಂಡು ಮಗು ಜನಿಸಿದ್ದು, ತಾಯಿ-ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ. ಇದಾದ ಅರ್ಧಗಂಟೆಯಲ್ಲೇ ಮಗು ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮೃತಪಟ್ಟಿದೆ.

ತಾಯಿಯ ಗರ್ಭದಲ್ಲಿರುವಾಗಲೇ  ಮಗು ಮಲ ತಿಂದಿರುವುದರಿಂದ ಶಾಸಕೋಶಕ್ಕೆ ತೊಂದರೆ ಆಗಿ ಮಗು ಮೃತಪಟ್ಟಿದೆ. ಇದರಲ್ಲಿ ವೈದ್ಯರ ನಿರ್ಲಕ್ಷ್ಯ ಇಲ್ಲ ಎಂದು ವೈದ್ಯರ ಸಮಜಾಯಿಷಿ ನೀಡಿದ್ದು, ಇತ್ತ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತನಿಖೆಯಿಂದ ಈ ಸಾವಿನ ಅಸಲಿಯತ್ತು ಬಯಲಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next